ಸಾಂಭಾಲ್, ಮೇ 19 : ಉತ್ತರಪ್ರದೇಶದ ಸಾಂಭಾಲ್ ನಲ್ಲಿ ರಸ್ತೆ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಪುತ್ರನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ಈ ಭೀಕರ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
@dgpup pic.twitter.com/8mTC6OJ3vx
— Samajwadi Party (@samajwadiparty) May 19, 2020
ಸಂಭಾಲ್ ನಲ್ಲಿ ನರೇಗಾ ಯೋಜನೆಯಡಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಇದನ್ನು ಪರಿಶೀಲಿಸಲು ಸಮಾಜವಾದಿ ಪಕ್ಷದ ನಾಯಕ ಛೋಟೆ ಲಾಲ್ ದಿವಾಕರ್ ಮತ್ತು ಆತನ ಪುತ್ರ ಸುನೀಲ್ ಬಂದಿದ್ದರು. ಈ ವೇಳೆ ಅದೇ ಗ್ರಾಮದವರ ಜತೆ ಜಗಳವಾಗಿದೆ. ಇಬ್ಬರು ಗ್ರಾಮಸ್ಥರ ಬಳಿ ಬಂದೂಕು ಇದ್ದಿದ್ದರಿಂದ ಮಾತಿನ ಚಕಮಕಿಯಲ್ಲಿ ದಿವಾಕರ್ ಹಾಗೂ ಸುನೀಲ್ ಮೇಲೆ ಗುಂಡು ಹಾರಿಸಿದ್ದು ಇಬ್ಬರು ಮೃತಪಟ್ಟಿದ್ದಾರೆ.
ಇನ್ನು ದಿವಾಕರ್ ಮತ್ತು ಸುನೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾರನ್ನು ಬಂಧಿಸಿಲ್ಲ ಎಂದು ತಿಳಿದುಬಂದಿದೆ.