WI vs IND : 19 ವರ್ಷಗಳಿಂದ ಭಾರತದಲ್ಲಿ ಸರಣಿ ಗೆದ್ದಿಲ್ಲ ಕೆರಿಬಿಯನ್ಸ್
ಅಹ್ಮದಾಬಾದ್ ನ ನರೇಂದ್ರ ಮೋದಿ ಮೈದಾನದಲ್ಲಿ ಇಂಡೋ – ವಿಂಡೀಸ್ ಏಕದಿನ ಸರಣಿಯ ಎರಡನೇ ಪಂದ್ಯ ಆರಂಭವಾಗಿದೆ.
ಟಾಸ್ ಸೋತ ಟೀಂ ಇಂಡಿಯಾ ಬ್ಯಾಟಿಂಗ್ ಆರಂಭಿಸಿದೆ.
ಮೂರು ಮ್ಯಾಚ್ ಗಳ ಸರಣಿಯಲ್ಲಿ ಈಗಾಗಲೇ ಒಂದು ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಇಂದಿನ ಪಂದ್ಯ ಗೆದ್ದು, ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.
ಇತ್ತ ವೆಸ್ಟ್ ಇಂಡೀಸ್ ಇಂದಿನ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿ ಸರಣಿ ಜೀವಂತವಾಗಿರಿಸಿಕೊಳ್ಳುವ ಪ್ಲಾನ್ ಮಾಡಿಕೊಂಡಿದೆ.
ಅಂದಹಾಗೆ ವೆಸ್ಟ್ ಇಂಡೀಸ್ ಕಳೆದ 19 ವರ್ಷಗಳಿಂದ ಭಾರತದಲ್ಲಿ ಏಕದಿನ ಸರಣಿ ಗೆದ್ದಿಲ್ಲ.
2002 ನಲ್ಲಿ ಏಳು ಮ್ಯಾಚ್ ಗಳ ಸೀರಿಸ್ ನಲ್ಲಿ ವೆಸ್ಟ್ ಇಂಡೀಸ್ 4 – 3 ಅಂತರದೊಂದಿಗೆ ಸರಣಿ ವಶಪಡಿಕೊಂಡಿತ್ತು.
ಅದೇ ಕೊನೆಯ ಬಾರಿ ವಿಂಡೀಸ್ ಭಾರತದಲ್ಲಿ ಸರಣಿ ಗೆದ್ದಿದ್ದು.
ಆ ನಂತರ ವೆಸ್ಟ್ ಇಂಡೀಸ್ ಏಳು ಬಾರಿ ಭಾರತದ ಮೇಲೆ ದಂಡೇತ್ತಿ ಬಂದಿದೆ. ಆದರೆ ಏಳಕ್ಕೆ ಏಳೂ ಬಾರಿ ಮುಖಭಂಗ ಅನುಭವಿಸಿದೆ.
2007 ರಲ್ಲಿ 4 ಮ್ಯಾಚ್ ಗಳ ಸಿರೀಸ್.. 3-1ರಿಂದ ಭಾರತಕ್ಕೆ ಜಯ
2011 ರಲ್ಲಿ ಐದು ಮ್ಯಾಚ್ ಗಳ ಸರಣಿ .. 4-1ರಿಂದ ಭಾರತಕ್ಕೆ ಜಯ
2013 ರಲ್ಲಿ ಮೂರು ಮ್ಯಾಚ್ ಗಳ ಸರಣಿ.. 2-1ರಿಂದ ಭಾರತಕ್ಕೆ ಜಯ
2014 ರಲ್ಲಿ ಮೂರು ಮ್ಯಾಚ್ ಗಳ ಸರಣೀ.. 2-1 ರಿಂದ ಭಾರತಕ್ಕೆ ಜಯ
2018 ರಲ್ಲಿ 4 ಪಂದ್ಯ ಗಳ ಸರಣಿ.. 3-1ರಿಂದ ಭಾರತಕ್ಕೆ ಜಯ
2019 ರಲ್ಲಿ 2-1 ರಿಂದ ಭಾರತಕ್ಕೆ ಜಯ
2022 ಈಗ ಮೂರು ಮ್ಯಾಚ್ ಗಳ ಸರಣಿ.. ಭಾರತ ಈಗಾಗಲೇ 1-0 ಅಂತರ ಪಡೆದುಕೊಂಡಿದೆ.









