WIvsIND : ಒಂದೇ ಓವರ್ ನಲ್ಲಿ ವಿರಾಟ್ – ಪಂತ್ ಔಟ್
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. wivsind Odean Smith jolts IND virat kohli rishab pant
ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ಪಡೆಗೆ ವೆಸ್ಟ್ ಇಂಡೀಸ್ ಬೌಲರ್ ಗಳ ಕಡಿವಾಣ ಹಾಕಿದ್ದಾರೆ.
ಹೊಸ ಪಾಟ್ನರ್ ಜೊತೆ ಹೊಸ ಜೋಷ್ ನೊಂದಿಗೆ ಇನ್ನಿಂಗ್ಸ್ ಆರಂಭಿಸಿ ರೋಹಿತ್ ಶರ್ಮಾ 8 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.
2.6 ಓವರ್ ನಲ್ಲಿ 8 ರನ್ ಗಳಿಸಿದ್ದ ರೋಹಿತ್, ಕೆಮರೋನ್ ರೋಚ್ ಬೌಲಿಂಗ್ ನಲ್ಲಿ ಶಾಯಿಗೆ ಕ್ಯಾಚ್ ನೀಡಿದರು.
ಇದಾದ ಬಳಿಕ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ, ಆರಂಭದಲ್ಲಿ ಉತ್ತಮ ಟಚ್ ನಲ್ಲಿ ಕಾಣಿಸಿಕೊಂಡರು.
ಇತ್ತ ಆರಂಭದಿಂದಲೂ ನಿಧಾನಗತಿಯ ಆಟಕ್ಕೆ ಮೊರೆ ಹೋಗಿದ್ದ ರಿಷಬ್ ಪಂತ್, ಗೇರ್ ಚೇಂಜ್ ಮಾಡಿ ಬ್ಯಾಟ್ ಬೀಸಲು ಹೋಗಿ 18ಕ್ಕೆ ಔಟ್ ಆದರು.
ಇದೇ ಓವರ್ ನಲ್ಲಿ ವಿರಾಟ್ ಕೊಹ್ಲಿ ಕೂಡ 18ಕ್ಕೆ ಸುಸ್ತಾದರು.
ಈ ಜೋಡಿ 30 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದೆ. ಈ ಇಬ್ಬರು ಸ್ಮಿತ್ ಬೌಲಿಂಗ್ ನಲ್ಲಿ ಪೆವಿಲಿಯನ್ ಸೇರಿಕೊಂಡರು.









