wi-vs-ind-2nd-odi | ಅಪರೂಪದ ದಾಖಲೆ ಬರೆದ ಸೂರ್ಯಕುಮಾರ್
ಅಹಮದಾಬಾದ್ : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಅಪರೂಪದ ದಾಖಲೆ ಬರೆದಿದ್ದಾರೆ. wi-vs-ind-2nd-odi-surya becomes the first player to cross 30 in each of his first six ODI saaksha tv
ಈ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ 30 ರನ್ ಗಳಿಸುವ ಮೂಲಕ ಮೊದಲ ಆರು ಮ್ಯಾಚ್ ಗಳಲ್ಲಿ 30ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಲ್ಲದೆ ಹೀಗೆ ಮೊದಲ ಆರು ಪಂದ್ಯದಲ್ಲಿ ಸತತ ಮೂವತ್ತು ದಾಟಿದ ವಿಶ್ವದ ಮೊದಲ ಕ್ರಿಕೆಟ್ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.
ಇದಕ್ಕೂ ಹಿಂದೆ ರಿಯಾನ್ ಟೆನ್ ಡೋಸ್ಚೇಟ್, ಟಾಮ್ ಕೂಪರ್ ಮತ್ತು ಫಖರ್ ಜಮಾನ್ ತಮ್ಮ ಮೊದಲ ಐದು ಇನ್ನಿಂಗ್ಸ್‌ಗಳಲ್ಲಿ 30 ರನ್ ಗಳಿಸಿದ್ದರು. ಇಂದಿನ ಪಂದ್ಯದಲ್ಲಿ ಯಾದವ್ 30 ರನ್ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ.
ಮೊದಲ ಪಂದ್ಯದಲ್ಲಿ 31 ರನ್ ಗಳಿಸಿದ್ದ ಯಾದವ್, ನಂತರ, 53, 40, 39, 34, 64 ರನ್ ಗಳಿಸಿದ್ದಾರೆ.
ಇನ್ನು ಈವರೆಗೂ ಆರು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿರುವ ಯಾದವ್, 85ರ ಸರಾಸರಿಯೊಂದಿಗೆ 255 ರನ್ ಗಳಿಸಿದ್ದಾರೆ. ಇದರಲ್ಲಿ 2 ಅರ್ಧಶತಕಗಳಿವೆ.









