Karnatakacm | ನದಿ ಜೋಡಣೆ ಬಗ್ಗೆ ಬೊಮ್ಮಾಯಿ ಹೇಳಿದ್ದೇನು..?
ಬೆಂಗಳೂರು : ಕೇಂದ್ರದ ಬಜೆಟ್ ನಲ್ಲಿ ನದಿಜೋಡಣೆ ಬಗ್ಗೆ ಪ್ರಸ್ತಾಪವಾಗಿದ್ದು, ಈ ಬಗ್ಗೆ ರಾಜ್ಯದ ವಿಪಕ್ಷಗಳು ಕಿಡಿಕಾರುತ್ತಿವೆ.
ಇದರ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನದಿ ಜೋಡಣೆಯ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆ ಚರ್ಚಿಸಲಾಗಿದೆ.
ಎರಡು ರಾಜ್ಯಗಳು ಒಪ್ಪಿದರೆ ಮಾತ್ರ ನದಿ ಜೋಡಣೆ ಸಾಧ್ಯ ಎಂದು ಕೇಂದ್ರ ಸಚಿವರೂ ಸ್ಪಷ್ಟ ಪಡಿಸಿದ್ದಾರೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಮೇಕೆದಾಟು ವಿಚಾರವಾಗಿ ನಮ್ಮ ನಿಲುವು ಸ್ಪಷ್ಟವಾಗಿದೆ.
ತಮಿಳುನಾಡಿನ ವೈಗೈ – ಗುಂಡಾರು ಯೋಜನೆಗೆ ವಿರೋಧವಿದೆ. ಹೈಡ್ರೋ ಪವರ್ ಯೋಜನೆಗೂ ನಮ್ಮ ವಿರೋಧವಿದೆ ಎಂದು ತಿಳಿಸಿದರು.
ನದಿ ಜೋಡಣೆಯ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆ ಚರ್ಚಿಸಲಾಗಿದೆ. ಎರಡು ರಾಜ್ಯಗಳು ಒಪ್ಪಿದರೆ ಮಾತ್ರ ನದಿ ಜೋಡಣೆ ಸಾಧ್ಯ ಎಂದು ಕೇಂದ್ರ ಸಚಿವರೂ ಸ್ಪಷ್ಟ ಪಡಿಸಿದ್ದಾರೆ.
ಗೋದಾವರಿ, ಕೃಷ್ಣಾ, ಪೆನ್ನಾರ್ ನದಿ ಜೋಡಣೆಯ ಕುರಿತು ನಮ್ಮ ನಿಲುವನ್ನು ನಾವು ಈಗಾಗಲೇ ಸ್ಪಷ್ಟ ಪಡಿಸಿದ್ದೇವೆ. ಎಲ್ಲಿಯವರೆಗೆ ನಮ್ಮ ಪಾಲಿನ ನೀರಿನ ಬಗ್ಗೆ ಹಂಚಿಕೆ ಅಂತಿಮವಾಗುವುದಿಲ್ಲವೋ, ಅಲ್ಲಿಯವರೆಗೆ ನಮ್ಮ ವಿರೋಧವಿರುತ್ತದೆ.
ಅಂತಾರಾಜ್ಯ ಜಲ ವಿವಾದಗಳ ಚರ್ಚೆ ನಡೆಸಲಾಗಿದೆ. ಕೃಷ್ಣಾ ನ್ಯಾಯಾಧಿಕರಣದ ಆದೇಶ ಅಧಿಸೂಚನೆಗೆ ಮನವಿ ಮಾಡಲಾಗಿದೆ.
ಸುಪ್ರೀಂಕೋರ್ಟ್ನಲ್ಲಿ ಅಧಿಸೂಚನೆ ಹೊರಡಿಸುವ ಬಗ್ಗೆ ವಿಚಾರಣೆಗೆ ನ್ಯಾಯಾಧೀಶರನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ಓಪನ್ ಕೋರ್ಟ್ನಲ್ಲಿ ಮೆನ್ಷನ್ಗೆ ನಿರ್ಧಾರ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.