16,000 ಕ್ಕೂ ಹೆಚ್ಚು ಜನರು ಹಣಕಾಸಿನ ದಿವಾಳಿತನದಿಂದ ಆತ್ಮಹತ್ಯೆ: ನಿತ್ಯಾನಂದ ರೈ Saaksha Tv
ನವದೆಹಲಿ: 2018 ಮತ್ತು 2020 ರ ನಡುವೆ 16,000 ಕ್ಕೂ ಹೆಚ್ಚು ಜನರು ಹಣಕಾಸಿನ ದಿವಾಳಿತನ ಅಥವಾ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.
ರಾಜ್ಯಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು 2018 ಮತ್ತು 2020 ರ ನಡುವೆ 9,140 ಜನರು ನಿರುದ್ಯೋಗದಿಂದ ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ. ಈ ಕುರಿತು ಅಂಕಿ ಅಂಶ ರಾಜ್ಯಸಭೆಗೆ ಸಲ್ಲಿಸಿದ ಅವರು2020 ರಲ್ಲಿ 5,213 ಜನರು, 2019 ರಲ್ಲಿ 5,908 ಮತ್ತು 2018 ರಲ್ಲಿ 4,970 ಜನರು ದಿವಾಳಿತನ ಅಥವಾ ಸಾಲದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಅಲ್ಲದೇ 2020ರಲ್ಲಿ ಒಟ್ಟು 3,548, 2019ರಲ್ಲಿ 2,851 ಮತ್ತು 2018ರಲ್ಲಿ 2,741 ಮಂದಿ ನಿರುದ್ಯೋಗದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಲಿಖಿತ ಪ್ರಶ್ನೆಗೆ ಉತ್ತರಿಸಿದರು.









