Virat Kohli | ಅದೇ ನಿರ್ಲಕ್ಷ್ಯ.. ಮತ್ತೆ ನಿರಾಸೆ virat-kohli-fans-hurts-virat-kohli-careless-out saaksha tv
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ತವರಿನಲ್ಲಿ 100ನೇ ಏಕದಿನ ಪಂದ್ಯ ಆಡಿದ ವಿರಾಟ್ ಕೊಹ್ಲಿ ಮತ್ತದೇ ನಿರ್ಲಕ್ಷ್ಯದಿಂದ ವಿಕೆಟ್ ಒಪ್ಪಿಸಿದರು.
ಮತ್ತೊಮ್ಮೆ ತಮ್ಮ ಆಫ್ ಸ್ಟಂಪ್ ದೌರ್ಬಲ್ಯವನ್ನು ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಅಲ್ಲದೇ 100ನೇ ಪಂದ್ಯದಲ್ಲಿ ಕೇವಲ 18 ರನ್‌ಗಳಿಗೆ ಔಟಾದರು.
ಓಡೆನ್ ಸ್ಮಿತ್ ಎಸೆತದ 12ನೇ ಓವರ್ ನಲ್ಲಿ ಮೂರನೇ ಎಸೆತವನ್ನು ಬೌಂಡರಿಗಟ್ಟುವ ಅವಸರದಲ್ಲಿದ್ದ ಕೊಹ್ಲಿ, ಕ್ಯಾಚ್ ನೀಡಿ ಪೆವಿಯನ್ ಕಡೆ ಹೆಜ್ಜೆಹಾಕಿದರು.
ಪ್ರತಿಷ್ಠಾತ್ಮ 100 ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಔಟ್ ಆಗಿದ್ದು, ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ.
ಅಂದಹಾಗೆ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲೂ ವಿಫಲರಾಗಿದ್ದರು. ಕೇವಲ 8 ರನ್ ಗಳಿಸಿದ್ದರು. ಅದು ಕೂಡ ಎರಡು ಬೌಂಡರಿಗಳಿಂದ.
ಹೀಗಾಗಿ ವಿರಾಟ್ ಕೊಹ್ಲಿ ಮೇಲೆ ಆರೋಪಗಳ ಸುರಿಮಳೆಯಾಗುತ್ತಿದೆ. ಅದರಲ್ಲೂ ಸುನೀಲ್ ಗವಾಸ್ಕರ್, ವಿರಾಟ್ ಮೇಲೆ ಪದೇ ಪದೇ ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ.
ಇತ್ತ ಸೋಶಿಯಲ್ ಮೀಡಿಯಾದಲ್ಲಿ ಕೂಡ ವಿರಾಟ್ ಹೆಟರ್ಸ್, ಟ್ರೋಲ್ ಗಳನ್ನು ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಕಥೆ ಮುಗೀತು ಎಂಬಂತೆ ವ್ಯಂಗ್ಯವಾಡುತ್ತಿದ್ದಾರೆ.









