Statue of Equality – ಪ್ರತಿಮೆ ಚೀನಾದಲ್ಲಿ ನಿರ್ಮಾಣವಾಗಿದೆ ಎಂದ ರಾಹುಲ್ – ಸ್ಪಷ್ಟನೆ ನೀಡಿದ ಕೇಂದ್ರ ಸಚಿವ…
ಹೈದರಾಬಾದ್ ನಲ್ಲಿ ಸ್ಥಾಪಿಸಲಾಗಿರುವ ಸಂತ ರಾಮಾನುಜಾಚಾರ್ಯರ 216 ಅಡಿಯ ಸಮಾನತೆಯ ಪ್ರತಿಮೆಗಳ ಕುರಿತು ಈಗ ವಿವಾದಗಳೆದ್ದಿವೆ. ಈ ಪ್ರತಿಮೆಯನ್ನ ಚೀನಾದಲ್ಲಿ ನಿರ್ಮಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರೋಧಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತದ ಬಗ್ಗೆ ರಾಹುಲ್ ಪ್ರಶ್ನೆ ಎತ್ತಿದ್ದಾರೆ. ಈ ಪ್ರತಿಮೆ ಚೀನಾದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಆದರೆ ಈ ಕುರಿತು ಕೇಂದ್ರ ಸಚಿವ ಕಿಶನ್ ರೆಡ್ಡಿ ಇದನ್ನ ಅಲ್ಲಗಳೆದಿದ್ದು ಮೂರ್ತಿ ಪ್ರತಿಷ್ಠಾಪನೆ ಖಾಸಗಿ ಪ್ರಯತ್ನ ಎಂದು ಹೇಳಿದ್ದಾರೆ. ಈ ಪ್ರತಿಮೆಯ ಕಲ್ಪನೆ ಚಿನ್ನ ಜೀಯಾರ್ ಸ್ವಾಮಿಯವರದ್ದು. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಇಲ್ಲ ಎಂದು ತಿಳಿಸಿದ್ದಾರೆ.
ಪ್ರತಿಮೆಯ ಬಗ್ಗೆ ಕೆಲವು ಪ್ರಮುಖ ಮಾಹಿತಿಗಳು….
ಸಮಾನತೆಯ ಪ್ರತಿಮೆಯನ್ನ ಚೀನಾದ ಏರೋಸಮ್ ಕಾರ್ಪೊರೇಷನ್ ಮಾಡಿದೆ. ಭಾರತದಲ್ಲಿ ಅಸೆಂಬ್ಲಿ ಮಾಡಿದ್ದರೆ ಚೀನಾದಲ್ಲಿ ಅಚ್ಚು ಹಾಕಲಾಗಿದೆ ಎಂದು ಸುದ್ದಿಯಲ್ಲಿ ಹೇಳಲಾಗಿದೆ.
ಪ್ರತಿಮೆ ನಿರ್ಮಾಣಕ್ಕೆ ದೇಣಿಗೆ ತೆಗೆದುಕೊಳ್ಳಲಾಗಿದೆ. ಪ್ರತಿಮೆ ನಿರ್ಮಾಣಕ್ಕೆ 135 ಖರ್ಚಾಗಿದ್ದು ಇಡೀ ಯೋಜನೆಗೆ 1000 ಕೋಟಿ ರೂ. ವ್ಯಯಿಸಲಾಗಿದೆ.
ಪ್ರತಿಮೆ ನಿರ್ಮಾಣದಲ್ಲಿ ಸರ್ಕಾರದ ಕೈವಾಡವಿಲ್ಲ ಎಂದು ಕೇಂದ್ರ ಸಚಿವ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಎಂಟು ವರ್ಷಗಳ ಹಿಂದೆ ಆಶ್ರಮದಿಂದ ಪರಿಕಲ್ಪನೆಯಲ್ಲಿ ಈ ಮೂರ್ತಿಯ ಕಲ್ಪನೆ ಮುನ್ನೆಲೆಗೆ ಬಂದಿತ್ತು.
ಈ ಯೋಜನೆಯು ಪ್ರಧಾನಿ ನರೇಂದ್ರ ಮೋದಿಯವರ ‘ಸ್ವಾವಲಂಬಿ ಭಾರತ’ದ ಕರೆಗೆ ಮುಂಚಿತವಾಗಿರುತ್ತದೆ ಎಂದು ರೆಡ್ಡಿ ಹೇಳಿದರು. 2015ರಲ್ಲಿ ಎರೋಸಮ್ ಕಾರ್ಪೊರೇಷನ್ ಗೆ ಗುತ್ತಿಗೆ ನೀಡಲಾಗಿತ್ತು. ಇದಕ್ಕೂ ಒಂದು ವರ್ಷ ಮೊದಲು ಮೋದಿ ಸರ್ಕಾರ ರಚನೆಯಾಗಿತ್ತು.
ಭಾರತೀಯ ಕಂಪನಿಯೂ ಟೆಂಡರ್ ರೇಸ್ ನಲ್ಲಿದ್ದು, ಚೀನಾ ಕಂಪನಿ ಟೆಂಡರ್ ಪಡೆಯುವಲ್ಲಿ ಯಶಸ್ವಿಯಾಗಿದೆ.
ಈ ಪ್ರತಿಮೆಯನ್ನು ಜೋಡಿಸುವ ಕೆಲಸವನ್ನು ಭಾರತದಲ್ಲಿ ಮಾಡಲಾಯಿತು ಮತ್ತು ಇದು 15 ತಿಂಗಳ ಕಾಲ ನಡೆಯಿತು.
ಹೈದರಾಬಾದ್ ವಿಮಾನ ನಿಲ್ದಾಣದ ಬಳಿ ಶಂಶಾಬಾದ್‌ನ ದೇವಸ್ಥಾನದಲ್ಲಿ ನಿರ್ಮಿಸಲಾದ ಸಮತಾ ಕೇಂದ್ರದಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಈ ಕೇಂದ್ರದ ನಿರ್ಮಾಣಕ್ಕೆ ಕೈಗಾರಿಕೋದ್ಯಮಿ ಜೂಪಲ್ಲಿ ರಾಮೇಶ್ವರ್ ರಾವ್ ಅವರು 45 ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ.