Modi : ಮೋದಿ ಅವರ ಮಾತುಗಳನ್ನ ಕೇಳಿ ಭಯವಾಗ್ತಿಲ್ಲ , ನಗು ಬರುತ್ತಿದೆ : ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಸತ್ತಿನಲ್ಲಿ ಮಾಡಿದ ಭಾಷಣಗಳು ಮತ್ತು ನಂತರ ರಾಷ್ಟ್ರೀಯ ಮಾಧ್ಯಮಕ್ಕೆ ಅವರು ನೀಡಿದ ವಿಶೇಷ ಸಂದರ್ಶನದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರತಿಕ್ರಿಯೆ ನೀಡಿದ್ದಾರೆ…
ಈ ವೇಳೆ ಮೋದಿ ಅವರು ಕೇವಲ ಕಾಂಗ್ರೆಸ್ ಬಗ್ಗೆ ಮಾತನಾಡುವುದಕ್ಕಾಗಿಯೇ ತಮ್ಮ ಸಮಯ ವ್ಯರ್ಥ ಮಾಡಿದರು ಎಂದು ರಾಹುಲ್ ಗಾಂಧಿ ಅವರು ಲೇವಡಿ ಮಾಡಿದರು..
ಇದೇ 14 ರಂದು ಉತ್ತರಖಂಡದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ರ್ಯಾಲಿಯಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಅವರು ಈ ಬಗ್ಗೆ ಮಾತನಾಡಿ , ಮೋದಿ ಅವರ ಮಾತುಗಳನ್ನ ಕೇಳಿ ನನಗೆ ಭಯವಾಗ್ತಿಲ್ಲ , ನಗು ಬರುತ್ತಿದೆ ಎಂದಿದ್ದಾರೆ..
ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಭಾಷಣದ ವೇಳೆ ಕಾಂಗ್ರೆಸ್ ಗಾಗಿಯೇ ತಮ್ಮ ಸಂಪೂರ್ಣ ಸಮಯವನ್ನು ನೀಡಿದರು ಆದರೆ ಅವರು ಚೀನಾದ ಬಗ್ಗೆ ನನ್ನ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.. ನಂತರ ಸಂದರ್ಶನದಲ್ಲಿ ರಾಹಲ್ ಯಾವುದನ್ನೂ ಕೇಳುವುದಿಲ್ಲ ದರು , ನಿಮಗೆ ಇದರ ಅರ್ಥವೇನೆಂದು ಗೊತ್ತಾ..?
ಇದರರ್ಥ ಇಡಿ ಮತ್ತು ಸಿಬಿಐನ ಒತ್ತಡವು ರಾಹುಲ್ ಮೇಲೆ ಕೆಲಸ ಮಾಡುವುದಿಲ್ಲ ಎಂಬುದು.. ಎಂದು ರಾಹುಲ್ ಗಾಂಧಿ ಅವರು ಹೇಳಿಕೊಂಡಿದ್ಧಾರೆ..
UP Election – ಯುಪಿಯಂತೆ ಕೆರಳದಲ್ಲಿ ಧರ್ಮದ ಮೇಲೆ ಕೊಲೆಯಾಗುವುದಿಲ್ಲ. ಯೋಗಿ ಹೇಳಿಕೆಗೆ ಪಿಣರಾಯ್ ತಿರುಗೇಟು..
ಅಲ್ಲದೇ ನರೇಂದ್ರ ಮೋದಿ ಅವರು ನೋಟು ನಿಷೇಧ, ದೋಷಪೂರಿತ ಜಿಎಸ್‌ಟಿ ಮೂಲಕ ಭಾರತದ ಸಣ್ಣ ವ್ಯಾಪಾರಿಗಳು, ಮಧ್ಯಮ ವ್ಯಾಪಾರಿಗಳು, ರೈತರು ಮತ್ತು ಕಾರ್ಮಿಕರಿಗೆ ತೊಂದರೆ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಅಕ್ರೋಶ ಹೊರಹಾಕಿದ್ದಾರೆ..









