Hijab Controvercy : ಮುಂದಿನ ಆದೇಶದ ವರೆಗೂ ವಿದ್ಯಾರ್ಥಿಗಳು ಧಾರ್ಮಿಕ ಗುರುತುಗಳನ್ನು ಧರಿಸುವಂತಿಲ್ಲ ಹೈ ಕೋರ್ಟ್…
ರಾಜ್ಯದಲ್ಲಿ ಹಿಜಬ್ – ಕೇಸರಿ ಶಾಲು ಹಿಂಸಾಚಾರ ಭುಗಿಲೆದ್ದಿರುವ ನಡುವೆಯೇ ಇಂದು ವಿಚಾರಣೆ ಕೈಗೆತ್ತುಕೊಂಡಿದ್ದ ಹೈ ಕೋರ್ಟ್ ವಿಸ್ತೃತ ಪೀಠ ವಿಚಾರಣೆಯನ್ನ ಸೋಮವಾರಕ್ಕೆ ಮುಂದೂಡಿದೆ..
ಆದ್ರೆ ಮುಂದಿನ ಆದೇಶದ ವರೆಗೂ ಯಾವ ವಿದ್ಯಾರ್ಥಿಗಳು ಕೂಡ ಧಾರ್ಮಿಕ ಗುರುತುಗಳನ್ನ , ಕೇಸರಿ , ನೀಲಿ ಶಾಲುಗಳಾಗಿರಬಹುದು, ಹಿಜಬ್ ಗಳಾಗಿರಬಹುದು , ಯಾವುದನ್ನೂ ಧರಿಸುವ ಹಾಗಿಲ್ಲ ಎಂದು ಎಂದು ಆದೇಶಿಸಿದೆ..
ಆದ್ರೆ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೋಗಬೇಕು.. ಧಾರ್ಮಿಕ ಗುರುತುಗಳನ್ನ ಧರಿಸುವಂತಿಲ್ಲ ಎಂದು ಸೂಚಿಸಿದೆ.. ಸದ್ಯ ವಿಚಾರಣೆಯನ್ನ ಸೋಮವಾರಕ್ಕೆ ಮುಂದೂಡಲಾಗಿದೆ. ಸೋಮವಾರ ಮಧ್ಯಾಹ್ನ 2.30 ಕ್ಕೆ ವಿಚಾರಣೆ ಮುಂದೂಡಲಾಗಿದೆ.. ಹೈಕೋರ್ಟ್ ನ ತ್ರಿಸದ್ಯ ಪೀಠವು ಮೌಕಿಕವಾಗಿ ತಿಳಿಸಿದೆ..










