ಯೋಗಿ ಆದಿತ್ಯನಾಥ್ ಕೇರಳ –ಬಂಗಾಳ ವೀಡಿಯೋ ಟೀಕಿಸಿದ ರಾಹುಲ್
ಬಿಜೆಪಿಗೆ ಓಟ್ ಹಾಕದಿದ್ದರೆ ರಾಜ್ಯ ಜಮ್ಮು ಕಾಶ್ಮೀರ, ಕೇರಳ ಅಥವಾ ಪಶ್ಚಿಮ ಬಂಗಾಳ ಆಗುತ್ತದೆ ವಿರುದ್ಧ ಯು.ಪಿ ಮತದಾರರಿಗೆ ಎಚ್ಚರಿಕೆ ನೀಡಿದ ಯೋಗಿ ಆದಿತ್ಯನಾಥ್ ವಿರುದ್ಧ ಕಾಂಗ್ರೆಸ್ ರಾಹುಲ್ ಗಾಂಧಿ ಗುರುವಾರ ಕಟುವಾದ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಮೊದಲ ಮತದಾನ ಮುಗಿತ ನಂತರ ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
“ಕಾಶ್ಮೀರದಿಂದ ಕೇರಳದವರೆಗೆ ಮತ್ತು ಗುಜರಾತ್‌ನಿಂದ ಪಶ್ಚಿಮ ಬಂಗಾಳದವರೆಗೆ ಭಾರತವು ತನ್ನ ಎಲ್ಲಾ ಬಣ್ಣಗಳಲ್ಲಿ ಸುಂದರವಾಗಿದೆ. ಭಾರತದ ಚೈತನ್ಯವನ್ನು ಅವಮಾನಿಸಬೇಡಿ,’’ ಎಂದು ರಾಹುಲ್ ಟ್ವಿಟ್ ಮಾಡಿದ್ದಾರೆ.
ಉತ್ತರ ಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಪ್ರಾರಂಭವಾಗುವ ಮೊದಲು, ಯೋಗಿ ಆರು ನಿಮಿಷಗಳ ವೀಡಿಯೊವನ್ನು ಟ್ವೀಟ್ ಮಾಡಿದ್ದರು. Rahul slams Yogi’s ‘UP-Kerala’ video, says don’t insult the spirit of India
ಆರು ನಿಮಿಷದ ವಿಡಿಯೋದಲ್ಲಿ ಯೋಗಿ, “ಎಚ್ಚರ! ತಪ್ಪಿದರೆ ಈ ಐದು ವರ್ಷಗಳ ದುಡಿಮೆ ಹಾಳಾಗುತ್ತದೆ. ಉತ್ತರ ಪ್ರದೇಶವು ಕಾಶ್ಮೀರ, ಕೇರಳ ಮತ್ತು ಬಂಗಾಳವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಎಂದು ವೀಡಿಯೋ ಟ್ವೀಟ್ ಮಾಡಿದ್ದರು.
ಕಾಂಗ್ರೆಸ್ ಸಂಸದ ಶಶಿ ತರೂರ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಕೂಡ ಯೋಗಿ ಅವರ ವಿಡಿಯೋ ಕುರಿತು ವಾಗ್ದಾಳಿ ನಡೆಸಿದ್ದರು.








