ವೃದ್ದ ದಂಪತಿಗಳನ್ನ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬರ್ಬರ ಹತ್ಯೆ…
ಹಣ ಮತ್ತು ಚಿನ್ನಾಭರಣದ ಆಸೆಗೆ ಮಾರಕಾಸ್ತ್ರಗಳಿಂದ ವೃದ್ದ ದಂಪತಿಗಳನ್ನ ಕೊಚ್ಚಿ ಕೊಂದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ. ನಗರದ ವಾಸವಿ ಕಲ್ಯಾಣ ಮಂಟಪದ ಹಿಂಭಾಗ ಕೋಮಟಿಗರ ಬೀದಿಯಲ್ಲಿ ವಾಸವಿದ್ದ ವೃದ್ದ ದಂಪತಿಗಳಾದ ದೊಂತಿ ಶ್ರೀನಿವಾಸಲು(78) ಮತ್ತು ಪದ್ಮಾವತಿ (68) ಎಂಬುವವರನ್ನ ಭೀಕರವಾಗಿ ಕೊಲೆಮಾಡಲಾಗಿದೆ.
ಬುಧವಾರ ತಡರಾತ್ರಿ ಗವಾಕ್ಷಿಯಿಂದ ಮನೆಯೊಳಕ್ಕೆ ಪ್ರವೇಶಿಸಿರುವ ದುಷ್ಕರ್ಮಿಗಳು ದಂಪತಿಯನ್ನು ಮನಸೋ ಇಚ್ಚೆ ಥಳಿಸಿ, ಬಲವಾದ ಆಯುಧದಿಂದ ಅವರ ಮೇಲೆ ದಾಳಿ ಮಾಡಿ, ಕೊಲೆ ಮಾಡಿದ್ದಾರೆ. elderly couples were murdered in the Chikkaballapur district of Shidlaghatta
ವೃದ್ದ ದಂಪತಿಯ ಮೃತದೇಹಗಳು ಮನೆಯಲ್ಲಿ ಬೇರೆ ಬೇರೆ ಕಡೆ ಕಂಡು ಬಂದಿವೆ. ಶ್ರೀನಿವಾಸಲು ಅವರ ಮೃತದೇಹ ಬಚ್ಚಲು ಮನೆಯಲ್ಲಿ ಸಿಕ್ಕಿದೆ. ಅವರ ಮಡದಿ ಪದ್ಮಾವತಿ ಅವರನ್ನು ನಡುಮನೆಯಲ್ಲಿ ಕೊಲೆ ಮಾಡಲಾಗಿದೆ. ಸಾವಿಗೂ ಮುನ್ನ ಪದ್ಮಾವತಿ ಅವರ ಮೇಲೆ ತೀವ್ರವಾಗಿ ದಾಳಿ ಮಾಡಿರುವುದಾಗಿ ಕಂಡು ಬಂದಿದೆ. ಮೇಲಾಗಿ ತಲೆಗೆ ಬಲವಾದ ಆಯುಧದಿಂದ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವವಾಗಿ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.ಕೊಲೆ ಮಾಡಿದ ನಂತರ ಮನೆಯಲ್ಲಿದ್ದ ಚಿನ್ನಾಭರಣ ಬೆಳ್ಳಿ ಮತ್ತು ಹಣವನ್ನ ದುಷ್ಕರ್ಮಿಗಳು ಕೊಳ್ಳೆ ಹೊಡೆದಿದ್ದಾರೆ..








