IPL 2022 | 10 ತಂಡಗಳು.. 561.50 ಕೋಟಿ.. ರಣರೋಚಕ ಮೆಗಾ ಹರಾಜು
10 ತಂಡಗಳು… ರೂ. 561.50 ಕೋಟಿ… ಅದೃಷ್ಟ ಪರೀಕ್ಷೆಯಲ್ಲಿ 600 ಮಂದಿ… ಕ್ರಿಕೆಟ್ ಅಭಿಮಾನಿಗಳ ಹಬ್ಬವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅಸಲಿ ಆಟಕ್ಕೂ ಮುನ್ನವೇ ‘ದುಡ್ಡಿನಾಟಕ್ಕೆ’ಮೈದಾನ ಸಿದ್ಧವಾಗಿದೆ.
ನಾಲ್ಕು ವರ್ಷಗಳ ವಿರಾಮದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರರು ಲಭ್ಯವಾಗಲಿದ್ದು, ಮೆಗಾ ಹರಾಜು ನಡೆಯಲಿದೆ.
ಅಬ್ಬಾ ಅನಿಸುವ ಅಚ್ಚರಿಗಳು, ಅಯ್ಯೋ ಎನಿಸುವ ನಿರಾಸೆಗಳು, ವ್ಹಾ ಅನಿಸುವ ಆಯ್ಕೆಗಳು.. ಇದು ಐಪಿಎಲ್ ಆಕ್ಷನ್ ಸೆಲೆಕ್ಷನ್..!!
ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಮೆಗಾ ಹರಾಜಿನಲ್ಲಿ ತಮ್ಮ ಹೆಸರು ಬರುತ್ತಿದ್ದಂತೆ. ಆಟಗಾರನ ಎದೆ ಬಡಿತ ಜೋರಾಗುತ್ತೆ.
ಒಂದು ಸೀಸರ್ ಮಾತ್ರವಲ್ಲದೇ ಭವಿಷ್ಯವನ್ನು ದೃಷ್ಠಿಯಲ್ಲಿಟ್ಟುಕೊಂಡು ಪ್ರಾಂಚೈಸಿಗಳು ಆಟಗಾರರನ್ನ ಖರೀದಿಸುತ್ತವೆ.
ಸ್ಥಳ : ಬೆಂಗಳೂರು
ದಿನಾಂಕ : ಫೆಬ್ರವರಿ 12,13
ರಿಟೈನ್ಡ್ ಆಟಗಾರರ ಸಂಖ್ಯೆ : 33
ಹರಾಜಿನಲ್ಲಿರುವ ಆಟಗಾರರ ಸಂಖ್ಯೆ 600 ಮಂದಿ..( 377 ಮಂದಿ ಭಾರತೀಯರು, 223 ವಿದೇಶಿ ಆಟಗಾರರು)
ಹರಾಜಿನಲ್ಲಿ ಖರೀದಿಯಾಗುವ ಗರಿಷ್ಠ ಆಟಗಾರರ ಸಂಖ್ಯೆ : 227
ಒಂದು ತಂಡ ಖರೀಸಿದಬಹುದಾದ ಆಟಗಾರರ ಸಂಖ್ಯೆ : 18 ರಿಂದ 25 ( 8ವ ವಿದೇಶಿಗರು )
ಒಂದು 90 ಕೋಟಿ ಖರ್ಚು ಮಾಡಬಹುದು







