ದಿವ್ಯಾಂಗ ಮಕ್ಕಳನ್ನು ದತ್ತು ಪಡೆದು ಮಾದರಿಯಾದ ನಟಿ Saaksha Tv
ಕನ್ನಡದ ನಟಿ ಶ್ರೀಲೀಲಾ ಅವರು ಸದ್ಯ ಸಾಲು, ಸಾಲು ಸಿನಿಮಾಗಳ ಮೂಲಕ ಸುದ್ದಿಯಲ್ಲಿ ಇದ್ದು, ‘ಬೈ ಟು ಲವ್’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ಬೈ ಟು ಲವ್’ ಚಿತ್ರವು ಇದೇ ಫೆಬ್ರವರಿ 18 ರಂದು ತೆರೆ ಕಾಣಲಿದ್ದು, ಈ ಚಿತ್ರದ ನಾಯಕಿ ಶ್ರೀಲೀಲಾ ಅವರು ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ. ಈ ಮೂಲಕ ಶ್ರೀಲಿಲಾ ಅವರು ಸುದ್ದಿಯಲ್ಲಿದ್ದಾರೆ. ಸದಾ ಸಿನಿಮಾ ಮೂಲಕ ಸುದ್ದಿಯಲ್ಲಿರುತ್ತಿದ್ದ ಶ್ರೀಲಿಲಾ ಅವರು ಈಗ ತೆರೆಯ ಹೊರಗು ಸುದ್ದಿಯಾಗಿದ್ದಾರೆ.
ಹೌದು ಶ್ರೀಲೀಲಾ ತೆರೆಯ ಮೇಲೆ ಮಾತ್ರ ಅಲ್ಲ ನಿಜ ಜೀವನದಲ್ಲೂ ಕೂಡ ಹೀರೋಯಿನ್ ಆಗಿದ್ದಾರೆ ಇವರು ತಮ್ಮ ಜೀವನದಲ್ಲಿ ಉತ್ತಮ ನಿರ್ಧಾರ ಒಂದನ್ನು ತೆಗೆದುಕೊಳ್ಳವ ಮೂಲಕ ಅಭಿಮಾನಿಗಳ ಪಾಲಿಗೆ ರಿಯಲ್ ಹಿರೋಯಿನ್ ಆಗಿದ್ದಾರೆ.
ಅದೇನಪ್ಪಾ ಉತ್ತಮ ನಿರ್ಧಾರ ಅಂತಿರಾ ಶ್ರೀಲೀಲಾ ಅವರು ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ. ವಿಶೇಷ ಎಂದರೆ ಎಲ್ಲರೂ ಸುಂದರವಾಗಿರುವ, ಆರೋಗ್ಯವಾಗಿರುವ ಮಕ್ಕಳನ್ನೇ ದತ್ತು ಪಡೆಯಲು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರೆ ಶ್ರೀಲೀಲಾ, ದಿವ್ಯಾಂಗ ಮಕ್ಕಳನ್ನು ದತ್ತು ಸ್ವೀಕಾರ ಮಾಡಿ ರಿಯಲ್ ಹಿರೋಯಿನ್ ಆಗಿದ್ದಾರೆ.
ಇಬ್ಬರು ಅನಾಥ ದಿವ್ಯಾಂಗ ಮಕ್ಕಳನ್ನು ಶ್ರೀಲೀಲಾ ದತ್ತು ಪಡೆದುಕೊಂಡಿದ್ದು, ಈ ಮಕ್ಕಳ ಸಂಪೂರ್ಣ ಜವಾಬ್ದಾರಿ ಈಗ ನಟಿ ಶ್ರೀಲೀಲಾ ಅವರದ್ದೇ ಆಗಿರುತ್ತದೆ. ಈ ಮೂಲಕ ಇಬ್ಬರು ಮಕ್ಕಳ ಬಾಳಿಗೆ ಈ ಯುವ ನಟಿ ಬೆಳಕಾಗಿದ್ದಾರೆ. ಶ್ರೀ ಮನೋವಿಕಾಸ ಕೇಂದ್ರದಿಂದ ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ.
ಗುರು ಮತ್ತು ಶೋಭಿತ ಶ್ರೀಲೀಲಾ ಅವರು ದತ್ತು ಪಡೆದ ಮಕ್ಕಳು! ಆಶ್ರಮದಿಂದ ಇಬ್ಬರು ಮಕ್ಕಳನ್ನು ನಟಿ ದತ್ತು ಸ್ವೀಕಾರ ಮಾಡಿದ್ದಾರೆ. ಅದರಲ್ಲಿ ಗುರು ಎಂಬ ಮಗು ಕೇವಲ 8 ತಿಂಗಳ ಮಗು. ಈ ಪುಟ್ಟ ಕಂದನ ಜೊತೆಗೆ, ಶೋಭಿತಾ ಎನ್ನುವ ಹೆಣ್ಣು ಮಗುವನ್ನು ಕೂಡ ಅವರು ದತ್ತು ಪಡೆದುಕೊಂಡಿದ್ದಾರೆ. ಮಕ್ಕಳನ್ನು ದತ್ತು ಪಡೆದುಕೊಂಡ ಬಳಿಕ ನಟಿ ಶ್ರೀಲೀಲಾ ಅವರು ಭಾವುಕರಾದರು.









