IPL 2022 Auction : ವಯಸ್ಸು 37.. ಮೊತ್ತ 7 ಕೋಟಿ.. RCBಗೆ ರಣಬೇಟೆಗಾರ ipl-2022-auction faf-du-plesssis RCB
ಫಾಪ್ ಡುಪ್ಲೆಸಿಸ್ … ದಕ್ಷಿಣ ಆಫ್ರಿಕಾದ ಹಿರಿಯ ಕ್ರಿಕೆಟಿಗ …. ವಯಸ್ಸು 37 … IPL-2021 ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನದಿಂದ ಚೆನ್ನೈ ತಂಡ ಚಾಂಪಿಯನ್ ಆಗುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸಿಎಸ್ ಕೆ ಪರ 16 ಪಂದ್ಯಗಳಲ್ಲಿ ಕಣಕ್ಕಿಳಿದ ಫಾಫ್, 633 ರನ್ ಗಳಿಸಿದ್ದರು. ಕಳೆದ ಸೀಸನ್ ನಲ್ಲಿ ಡುಪ್ಲಸಿಸ್ ಅವರ ವೈಯುಕ್ತಿಕ ಗರಿಷ್ಠ ಸ್ಕೋರ್ 95*.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಫಾಪ್ ಅದ್ಭುತವಾಗಿ ಮಿಂಚಿದ್ದರು.
59 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 86 ರನ್ ಗಳಿಸಿದ್ದರು. ಜೊತೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.
ಈ ಪಂದ್ಯದೊಂದಿಗೆ ಫಾಫ್ ಐಪಿಎಲ್ ನಲ್ಲಿ ನೂರು ಪಂದ್ಯಗಳನ್ನಾಡಿದರು.
ಆದ್ರೆ ರಿಟೇನ್ಷನ್ ಭಾಗವಾಗಿ ಫಾಫ್ ಅವರನ್ನ ಸಿಎಸ್ ಕೆ ತಂಡ ರಿಟೈನ್ಡ್ ಮಾಡಿಕೊಳ್ಳಲಿಲ್ಲ. ಹೀಗಾಗಿ ಫಾಫ್ ಮೆಗಾ ಹರಾಜಿಗೆ ಬಂದಿದ್ದರು.
ಅವರ ಮೂಲ ಬೆಲೆ 2 ಕೋಟಿ. ಆದ್ರೆ ಮೆಗಾ ಹರಾಜಿನಲ್ಲಿ ಫಾಫ್ ಅವರನ್ನ ಬೆಂಗಳೂರು ತಂಡ 7 ಕೋಟಿಗೆ ಖರೀದಿಸಿದೆ.
ಆರಂಭದಲ್ಲಿ ಫಾಫ್ ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪೈಪೋಟಿ ನೀಡಿತ್ತು. ಅಂತಿಮವಾಗಿ ಬೆಂಗಳೂರು ತಂಡ ಫಾಫ್ ಅವರನ್ನ ಬುಟ್ಟಿಗೆ ಹಾಕಿಕೊಂಡಿತು.
ಇದರೊಂದಿಗೆ ಡುಪ್ಲಸಿಸ್ ಇದೇ ಮೊದಲ ಬಾರಿಗೆ ಆರ್ ಸಿಬಿ ಗ್ಯಾಂಗ್ ಸೇರಿಕೊಂಡರು. ಹೀಗಾಗಿ ಆರ್ ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದು ಉತ್ತಮ ಡೀಲ್ ಅಂತಾ ಬರೆದುಕೊಳ್ಳುತ್ತಿದ್ದಾರೆ. ಕೊಹ್ಲಿ, ಮ್ಯಾಕ್ಸ್ ವೆಲ್, ಡುಪ್ಲೆಸಿಸ್ ಉತ್ತಮ ಕಾಂಬಿನೇಷನ್ ಎನ್ನುತ್ತಿದ್ದಾರೆ.
ಆದ್ರೀತ್ತ ಸಿಎಸ್ ಕೆ ಅಭಿಮಾನಿಗಳು.. ”ಇನ್ನು ಹಳದಿ ಜರ್ಸಿಯಲ್ಲಿ ನಿಮ್ಮನ್ನು ನೋಡಲು ಸಾಧ್ಯವಿಲ್ಲವೇ? ನಮ್ಮ ಹೃದಯ ಒಡೆದಿದೆ” ಎಂದು ಮುರಿದ ಹೃದಯದ ಎಮೋಜಿಗಳನ್ನು ಹಾಕಿಕೊಳ್ಳುತ್ತಿದ್ದಾರೆ.