Sessions 2022 : ಡಾ. ಜೆ ಅಲೆಗ್ಸಾಂಡರ್ ಅವರಿಗೆ ಸಂತಾಪ ಸೂಚಿಸಿದ ಸಿಎಂ
ಬೆಂಗಳೂರು : ಜಂಟಿ ಅಧಿವೇಶನ ಇಂದಿನಿಂದ ಆರಂಭವಾಗಿದೆ… ಆರಂಭದಲ್ಲಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗಿದೆ…
ಅಂತೆಯೇ ಡಾ. ಜೆ ಅಲೆಗ್ಸಾಂಡರ್ ಅವರಿಗೆ ಸಂತಾಪ ಸೂಚಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು , ಡಾ. ಜೆ ಅಲೆಗ್ಸಾಂಡರ್ ಅಪರೂಪದ ಅಧಿಕಾರಿ.
ಯಾವುದೇ ಹುದ್ದೆಯಲ್ಲಿದ್ರೂ, ಹುದ್ದೆಯ ಅಧಿಕಾರಕ್ಕಿಂತ, ಜನರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಅಲೋಚಿಸ್ತಿದ್ರು. ಬಹಳ ಅಪರೂಪದ ವ್ಯಕ್ತಿ. ನ್ಯಾಯಸಮ್ಮತ ಆಡಳಿತ ನೀಡಿದವರು.
ನಿವೃತ್ತಿ ನಂತರ ಎಲ್ಲರಿಗೂ ಬೇಕಾದ ವ್ಯಕ್ತಿಯಾದ್ರು. ಉದ್ಯಮದ ಮೇಲೆ ಹೆಚ್ಚು ಆಸಕ್ತಿ ಇತ್ತು. ನಿವೃತ್ತಿ ಬಳಿಕ ರಾಜಕಾರಣಕ್ಕೆ ಬಂದು ಯಶಸ್ವಿಯಾದ್ರು. ಅಧಿಕಾರಿಗಳು ರಾಜಕಾರಣದಲ್ಲಿ ಯಶಸ್ವಿ ಆಗೋದು ಕಡಿಮೆ. ಅವರು S.M ಕೃಷ್ಣಾ ಅವರ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ರು ಎಂದಿದ್ದಾರೆ…








