Karnataka sessions 2022 : ಕಲ್ಯಾಣ ಕರ್ನಾಟಕದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿಸಿದೆ : ಈಶ್ವರ್ ಖಂಡ್ರೆ
ರಾಜ್ಯಪಾಲರ ಭಾಷಣದಲ್ಲಿ ಅಭಿವೃದ್ಧಿ ಬಗ್ಗೆ ರಾಜ್ಯದಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಇಲ್ಲ. ನೀರಸವಾಗಿತ್ತು ಅವರ ಭಾಷಣ ಎಂದು ಕಾಂಗ್ರೆಸ್ ನಾಯಕ ಈಶ್ವರ್ ಖಂಡ್ರೆ ಅಸಮಾಧಾನ ಹೊರಹಾಕಿದ್ದಾರೆ…
ಕಲ್ಯಾಣ ಕರ್ನಾಟಕದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿಸಿದೆ. ಒಂದೇ ಒಂದು ಮನೆ ಕಟ್ಟಿಲ್ಲ ಆದರೆ ಲಕ್ಷಾಂತರ ಮನೆ ಕಟ್ಟಿದ್ದೇವೆ ಅಂತ ಸುಳ್ಳು ಹೇಳಿದ್ದಾರೆ. ಕೊರೊನಾ ಸಮಯದಲ್ಲಿ ಏನೇನೋ ಮಾಡಿದ್ದೇವೆ ಅಂದಿದ್ದಾರೆ. ಆದರೆ ಅದರಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಕಿಡಿಕಾರಿದ್ದಾರೆ…
ಇನ್ನೂ 40 % ಕಮಿಷನ್ ಆರೋಪದ ಬಗ್ಗೆ ಉಲ್ಲೇಖ ಇಲ್ಲ. ಇವತ್ತು ಯುವಕ ಯುವತಿಯ ಜೀವನ ಹಾಳಾಗ್ತಾ ಇದೆ. ಮಹಿಳೆಯರ ಮಕ್ಕಳ ಬಗ್ಗೆ ರಕ್ಷಣೆ ಇಲ್ಲ. ಅದರ ಬಗ್ಗೆಯೂ ಉಲ್ಲೇಖ ಇಲ್ಲ. ರೈತರ ಫಸಲ್ ಭೀಮಾ ಯೋಜನೆಯಿಂದ ರೈತರಿಗೆ ಲಾಭ ಇಲ್ಲ . ಅದನ್ನು ಸರಿ ಪಡಿಸುವ ಉಲ್ಲೇಖ ಇಲ್ಲ..
ಕಲ್ಯಾಣ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ಸರಿಪಡಿಸುವ ಬಗ್ಗೆ ಹೇಳಿಲ್ಲ. ಕೊರೊನಾ ಸಮಯದಲ್ಲಿ ಸಾವನ್ನಪ್ಪಿರುವ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಯಾರ ಪರನೂ ಅವರು ಇಲ್ಲ ಅನ್ನೊದು ಗೊತ್ತಾಗ್ತಾ ಇದೆ. ಜನಪರ ಇಲ್ಲ ಅನ್ನೋದು ಅವರ ಭಾಷಣದಿಂದ ಗೊತ್ತಾಗ್ತಾ ಇದೆ ಎಂದು ಅಸಮಾಧಾನ ಹೊರಹಾಕಿದ್ದಾರೆ…