ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಏರಿಕೆ | 100 ಡಾಲರ್ ಗೆ ತಲುಪುವ ಸಾಧ್ಯತೆ Saaksha Tv
ಲಂಡನ್ : ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದ್ದು, ಪ್ರತಿ ಬ್ಯಾರಲ್ ಗೆ 94.84 ಡಾಲರ್ ಏರಿಕೆಯಾಗಿದೆ.
ರಷ್ಯಾ – ಉಕ್ರೇನ್ ಬಿಕ್ಕಟ್ಟು ತೀವ್ರಗೊಂಡ ಪರಿಣಾಮ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿದೆ ಎನ್ನಲಾಗುತ್ತಿದೆ. ಕಚ್ಚಾ ತೈಲ ದರ ಭಾರತದ ರೂಪಾಯಿ ಪ್ರಕಾರ 7,165 ರೂ ಏರಿಕೆಯಾಗಿದೆ. ಅಲ್ಲದೇ ಶೀಘ್ರವೇ 100 ಡಾಲರ್ ಗೆ ಏರಿಕೆಯಾಗುವ ಸಾಧ್ಯತೆಯಿದೆ.
ಸದ್ಯ ಭಾರತದಲ್ಲಿ ಪೆಟ್ರೋಲ್ ದರ 100 ರೂ ಆಸುಪಾಸಿನಲ್ಲಿದ್ದು, 100 ಡಾಲರ್ ಗೇ ಏರಿಕೆಯಾದರೆ ಭಾರತದಲ್ಲಿ ಭಾರಿ ಏರಿಕೆಯಾಗಬಹುದು ಎನ್ನಲಾಗುತ್ತಿದೆ. ತಿಂಗಳದ ಅಂತ್ಯದ ವೇಳೆ 8 ವರ್ಷದಲ್ಲೇ ಮೊದಲ ಬಾರಿಗೆ 100 ಡಾಲರ್ ತಲುಪುವ ಸಾಧ್ಯತೆ ಇದೆ. ಕೊರೊನಾ ಹೊಡೆತದಿಂದ ನಲುಗಿದ್ದ ದೇಶಗಳು ಈಗಷ್ಟೇ ಆರ್ಥಿಕತೆ ಚೇತರಿಕೆ ಕಾಣುತ್ತಿವೆ. ದರ ಏರಿಕೆಯಾದಲ್ಲಿ ಹಲವು ರಾಷ್ಟ್ರಗಳ ಆರ್ಥಿಕತೆಯ ಮೇಲೆ ಭಾರೀ ಪೆಟ್ಟು ಬೀಳುವ ಸಾಧ್ಯತೆಯಿದೆ.
ತಿಂಗಳ ಅಂತ್ಯದ ವೇಳೆ 8 ವರ್ಷದ ಗರಿಷ್ಠವಾದ 100 ಡಾಲರ್ ತಲುಪುವ ಸಾಧ್ಯತೆ ಇದೆ. ಕೊರೊನಾ ಹೊಡೆತದಿಂದ ನಲುಗಿದ್ದ ದೇಶಗಳು ಈಗಷ್ಟೇ ಆರ್ಥಿಕತೆ ಚೇತರಿಕೆ ಕಾಣುತ್ತಿವೆ. ದರ ಏರಿಕೆಯಾದಲ್ಲಿ ಹಲವು ರಾಷ್ಟ್ರಗಳ ಆರ್ಥಿಕತೆಯ ಮೇಲೆ ಭಾರೀ ಪೆಟ್ಟು ಬೀಳುವ ಸಾಧ್ಯತೆಯಿದೆ.