#Boycott_ChennaiSuperKings ಟ್ರೆಂಡಿಂಗ್
ಐಪಿಎಲ್ ಮೆಗಾ ಹರಾಜಿನ ಬಳಿಕ ಯಾಕೋ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಸೀಬು ಸರಿಯಿಲ್ಲ ಅನಿಸುತ್ತೆ.
ಯಾಕಂದರೇ ಚೆನ್ನೈ ತಂಡವನ್ನು ತಲೆ ಮೇಲೆ ಇಟ್ಟಿಕೊಂಡಿರುವ ತಮಿಳುನಾಡು ಜನರೇ ಸಿಎಸ್ ಕೆ ತಂಡದ ವಿರುದ್ಧ ತಿರುಗಿ ಬಿದ್ದಿದ್ದಾರೆ.
#Boycott_ChennaiSuperKings ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಇದಕ್ಕೆ ಕಾರಣವಾಗಿಯೋದು ಲಂಕಾ ಪ್ಲೇಯರ್ ಮಹೀಷ್ ತೀಕ್ಷಣ ತಂಡದಲ್ಲಿರೋದು..!!!
ಹೌದು..! ಮೆಗಾ ಹಜಾರಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವೂ ಶ್ರೀಲಂಕಾದ ಮಿಸ್ಟರಿ ಸ್ಪಿನ್ನರ್ ಮಹೀಶ್ ತೀಕ್ಷಣ ಅವರನ್ನು 70 ಲಕ್ಷ ರೂ.ಗೆ ಖರೀದಿಸಿದೆ.
ಇದು ತಮಿಳುನಾಡಿಗರ ಕೆಂಗಣ್ಣಿಗೆ ಕಾರಣವಾಗಿದೆ. ತಮಿಳುಗರಿಗೆ ಘನಘೋರ ಅನ್ಯಾಯ ಮಾಡಿದ ಲಂಕಾದವರನ್ನು ತಂಡಕ್ಕೆ ಯಾರು ಸೇರಿಕೊಂಡಿದ್ದೀರಾ..?
ಲಕ್ಷಾಂತರ ಭಾರತೀಯ ತಮಿಳುಗರನ್ನ ನಿರಾಶ್ರಿತರನ್ನಾಗಿ ಮಾಡಿದ ದೇಶದ ಆಟಗಾರರನ್ನು ಖರೀದಿಸಿದ್ದು ಯಾಕೆ…?
ಮಹೀತ ತೀಕ್ಷಣ ಅವನ್ನು ಈ ಕೂಡಲೇ ತಂಡದಿಂದ ಕೈಬಿಡ ಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಅಲ್ಲದೇ #Boycott_ChennaiSuperKings ಎಂಬ ಅಭಿಯಾನ ಆರಂಭಿಸಿ ಸಿಎಸ್ ಕೆ ವಿರುದ್ಧ ಕೆಂಡಕಾರುತ್ತಿದ್ದಾರೆ.
ಅಲ್ಲದೇ ತಂಡಕ್ಕಾಗಿ ಅನೇಕ ಗೆಲುವುಗಳನ್ನು ತಂದುಕೊಟ್ಟ ಸುರೇಶ್ ರೈನಾ ಅವರನ್ನು ಖರೀದಿಸುವಂತೆ ಆಗ್ರಹಿಸುತ್ತಿದ್ದಾರೆ.









