Karnataka Session 2022 : ಪರಿಷತ್ ನಲ್ಲಿ ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ವಾಕ್ ಸಮರ
ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ಬಗ್ಗೆ ಆರೋಪ ಪ್ರತ್ಯಾರೋಪ ಜೋರಾಗಿತ್ತು… ಜಂಟಿ ಅಧಿವೇಶನದ ಎರಡನೇ ದಿನ ಪರಿಷತ್ ನಲ್ಲಿ ಮೇಕೆದಾಟು ವಿಚಾರ ಪ್ರಸ್ತಾಪವಾಗಿದ್ದು , ಪರಸ್ಪರ ಮಲ್ಲಯುದ್ಧಕ್ಕೆ ಕಾರಣವಾಯಿತು…
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಸಂದರ್ಭದಲ್ಲಿ ಪಿ. ರಾಜೀವ್ ಮಾತನಾಡಿ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು..
Session 2022 : ಸರ್ಕಾರ ಅನೈತಿಕ ಎಂದ ಬಿವಿ ವೆಂಕಟೇಶ್ ವಿರುದ್ಧ ಸದನದಲ್ಲಿ ಮುಗಿಬಿದ್ದ ಬಿಜೆಪಿ ಸದಸ್ಯರು
ಐದು ವರ್ಷ ಕಾಂಗ್ರೆಸ್ ಕೈಯಲ್ಲಿ ಅಧಿಕಾರ ಇತ್ತು… ನೀರಾವರಿ ಇಲಾಖೆ ಪಾದಯಾತ್ರೆ ಪ್ರಾರಂಭ ಮಾಡಿದವರ ಕೈಯಲ್ಲಿತ್ತು. ಇವರ ಔಟ್ ಕಂ ಏನು? ಅವಾಗ ಮೇಕೆದಾಟು ನೆನಪಾಗಿಲ್ವಾ?. ಅಂತರರಾಜ್ಯ ಯೋಜನೆ ಆರಂಭಿಸಲು ನಾಲ್ಕು ಹಂತ ಇರುತ್ತೆ. ಸಡಿಪಿಅರ್, ಅರಣ್ಯ ನಾಶಕ್ಕೆ ಪರ್ಯಾಯ ಭೂಮಿ, ಪರಿಸರ ಕ್ಲಿಯರೆನ್ಸ್, ಸಿಡಬ್ಡ್ಯುಸಿ ಹಂತ ದಾಟಬೇಕು
ಐದು ವರ್ಷ ನೀವು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ರಿ?. ಸಮ್ಮಿಶ್ರ ಸರ್ಕಾರ ಬರುವವರೆಗೆ ಡಿಪಿಆರ್ ಸಬ್ಮಿಟ್ ಆಗಿರಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ…
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಯು.ಟಿ ಖಾದರ್ ಕಾಂಗ್ರೆಸ್ ಸರ್ಕಾರ ಇದ್ದಾಗ ಡಿಪಿಆರ್ ಆಗಿತ್ತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಿವೈಸ್ ಡಿಪಿಆರ್ ಅಯಿತು. ಕೇಂದ್ರ ಸರ್ಕಾರ ಇವಾಗ ಅನುಮತಿ ಕೊಡಬೇಕು. ಮೇಕೆದಾಟು ಯೋಜನೆಗೆ ಬೆಂಬಲಿಸಿ ಎಂದಿದ್ದಾರೆ…








