Session 2022 : ಸರ್ಕಾರ ಅನೈತಿಕ ಎಂದ ಬಿವಿ ವೆಂಕಟೇಶ್ ವಿರುದ್ಧ ಸದನದಲ್ಲಿ ಮುಗಿಬಿದ್ದ ಬಿಜೆಪಿ ಸದಸ್ಯರು
ಜಂಟಿ ಅಧಿವೇಶನದ ಎರಡನೇ ದಿನವಾದ ಇಂದು ಸದನದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ವಾಕ್ ಸಮರ ನಡೆದಿದೆ.. ಕಾಂಗ್ರೆಸ್ ಸದಸ್ಯ ಬಿವಿ ವೆಂಕಟೇಶ್ ಮಾತಿಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ…
ಕಾಂಗ್ರೆಸ್ ಸದಸ್ಯರಾದ ವೆಂಕಟೇಶ್ ಅವರು , ಅದೇನೋ ಗೊತ್ತಿಲ್ಲ ಈ ಸರ್ಕಾರದ ಕಥೆ. ಅನೈತಿಕವಾಗಿ ಸರ್ಕಾರ ಬಂದಿದೆ. ಬಿಎಸ್ ವೈ ಬಂದಾಗೆಲ್ಲಾ ಅವರ ಕಡೆಯವರೇ ತೊಂದರೆ ಕೊಡ್ತಾರೆ. ಬಿಎಸ್ ವೈ ನ ಸ್ಥಾನದಿಂದ ಇಳಿಸಿ ಬೊಮ್ಮಾಯಿ ಬಂದರು. ಬೊಮ್ಮಾಯಿ ಅವರ ಕಥೆಯೇನೋ ಗೊತ್ತಿಲ್ಲ ಎಂದಿದ್ದಾರೆ..
ವೆಂಕಟೇಶ್ ಅವರ ಅನೈತಿಕ ಸರ್ಕಾರ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ..
ಇದೇ ವೇಳೆ ಆಡಳಿತ ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿ ನಡೆದಿದೆ.. ಅನೈತಿಕ ಸರ್ಕಾರ ಎಂದಿದ್ದನ್ನ ಕೆಡತದಿಂದ ತೆಗೆಸಿ ಎಂದು ಸಚಿವ ಬೈರತಿ ಬಸವರಾಜು ಆಗ್ರಹಿಸಿದರು.. ಕಾಂಗ್ರೆಸ್ ನಾಯಕರ ಹೇಳಿಕೆ ವಿರೋಧಿಸಿ ಇದು ಸಾಂವಿಧಾನಿಕ ಸರ್ಕಾರ, ಅನೈತಿಕ ಅಲ್ಲ ಎಂದಿದ್ದಾರೆ.
ಅನೈತಿಕ ಸರ್ಕಾರ ಎಂದಿದ್ದು ಸರಿ ಅಲ್ಲ ಎಂದು ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಭಾಪತಿ ಸ್ಥಾನದಲ್ಲಿದ್ದ ಶ್ರೀಕಂಟೇಗೌಡರು ಅನೈತಿಕ ಸರ್ಕಾರ ಅಸಂಸದೀಯ ಅಲ್ಲ ಎಂದರು..
ಅಲ್ಲದೇ ನಾನು ಸಮಗ್ರವಾಗಿ ಅಧ್ಯಯನ ಮಾಡಿದ್ದೇನೆ. ಅನೈತಿಕ ಎಂಬುದು ಅಸಾಂವಿಧಾನಕ ಪದವಲ್ಲ. ಹೀಗಾಗಿ ಕಡತದಿಂದ ತೆಗೆಸುವ ಅಗತ್ಯವಿಲ್ಲ ಎಂದು ವಾದಿಸಿದರು..
ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ , ಪ್ರತಿ ಶಬ್ದಕ್ಕೂ ವಿರೋಧ ವ್ಯಕ್ತಪಡಿಸಿದರೆ ನಾವು ಮಾತನಾಡುವುದು ಹೇಗೆ?, ನಾವು ವಿರೋಧ ಪಕ್ಷದವರು ಸರ್ಕಾರವನ್ನು ಹೊಗಳುವುದಕ್ಕೆ ಬಂದಿಲ್ಲ, ರಾಜ್ಯಪಾಲರ ಭಾಷಣದಲ್ಲಿ ಏನಿದೆಯೋ ಅದನ್ನು ಪ್ರಸ್ತಾಪಿಸಿ ಮಾತನಾಡುತ್ತೇವೆ ಎಂದು ಹರಿಪ್ರಸಾದ್ ವಾದಿಸಿದ್ದಾರೆ…
ಅಲ್ಲದೇ ನಾನು ಸದನಕ್ಕೆ ಬಂದಾಗಿಂದ ಇಲ್ಲಿಯವರೆಗೆ ಅಸಾಂವಿಧಾನಿಕ ಪದವನ್ನು ಬಳಕೆ ಮಾಡಿಲ್ಲ ನಾನು ಹೇಳಿದ್ದರಲ್ಲಿ ತಪ್ಪಿದ್ದರೆ ಕಡತ ತೆಗೆಸಿ ನೋಡಿ ಎಂದು ಹೇಳಿದ ಬಿವಿ ವೆಂಕಟೇಶ್ ಅವರ ಕಾಲೆಳೆದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅವರು ಬರೆದುಕೊಂಡು ಬಂದಿದ್ದನ್ನು ಓದುತ್ತಾರೆ ಎಂದು ಟೀಕಿಸಿದರು..
ಅಲ್ಲದೇ ರಾಜ್ಯಪಾಲರೂ ಬರೆದಿದ್ದನ್ನೇ ಓದಿದ್ದಾರೆ ಎಂದು ಆಯನೂರುಗೆ ಬಿಕೆ ಹರಿಪ್ರಸಾದ್ ತಿರುಗೇಟು ಕೊಟ್ಟರು…
ಇದು ಸರಿಯಲ್ಲ, ಅವರು ಭಾಷಣ ಓದಿದರು, ನಾನು ಬರೆದುಕೊಂಡು ಬಂದಿದ್ದನ್ನು ಓದುತ್ತೇನೆ ಎಂಬುದು ಸಂಸದೀಯ ನಡೆಯಲ್ಲ ಎಂದು ಆಯನೂರು ಆಕ್ರೋಶ ಹೊರಹಾಕಿದರು…








