ADVERTISEMENT
Thursday, February 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ : CBI ತನಿಖೆಗೆ ಒತ್ತಾಯ – ಬ್ಯಾಂಕ್  ವ್ಯವಸ್ಥಾಪಕ ED ವಶಕ್ಕೆ..

Naveen Kumar B C by Naveen Kumar B C
February 16, 2022
in Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ : CBI ತನಿಖೆಗೆ ಒತ್ತಾಯ – ಬ್ಯಾಂಕ್  ವ್ಯವಸ್ಥಾಪಕ ED ವಶಕ್ಕೆ..

ಶ್ರೀ ಗುರು ರಾಘವೇಂದ್ರ ಕ್ರೆಡಿಟ್‌ ಕೋ-ಆಪರೇಟಿವ್‌ ಬ್ಯಾಂಕ್‌ ಮತ್ತು ಗುರು ಸಾರ್ವಭೌಮ ಸೌಹಾರ್ದ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ  ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ರಾಮಕೃಷ್ಣ  ಅವರನ್ನ ಜಾರಿ ನಿರ್ದೇಶನಾಲಯ ( ಇ ಡಿ )  ವಶಕ್ಕೆ ಪಡೆದುಕೊಂಡಿದೆ..

Related posts

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

February 19, 2026
ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

February 19, 2026

ಈ ಕುರಿತು ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್‌ ಬ್ಯಾಂಕ್‌ ಷೇರುದಾರರು  ಪತ್ರಿಕಾ ಗೋಷ್ಠಿ ನಡೆಸಿದರು.  ಡಾ. ಶಂಕರ್ ಗುಹಾ ಅವರು ಮಾತನಾಡಿ   “ ಸುದೀರ್ಘ ಎರೆಡು ವರ್ಷಗಳ ಸತತ ಹೋರಾಟಕ್ಕೆ  ಜಯ ಸಿಕ್ಕಿದ್ದು ಸಮಾಧಾನ ತಂದಿದೆ.  ಕರ್ನಾಟಕ ಪೊಲೀಸರ ಮೇಲೆ ನಮಗೆ ನಂಬಿಕೆಯಿದೆ.  ಆದ್ರೆ ರಾಜಕೀಯ ಒತ್ತಡ ಬಂದ ಹಿನ್ನಲೆ ಸ್ವಲ್ಪ ಹಿನ್ನಡೆಯಾಗಿತ್ತು. 834 ಕೋಟಿ ಬೇನಾಮಿ ಹಣ ಪತ್ತೆಯಾಗಿದೆ. ಇದು ಸೂಕ್ತ ಸಮಯವಾಗಿದ್ದು, ಸಿಬಿಐ ತನಿಖೆ ಆಗ್ಬೇಕಿದೆ. ಸಿಬಿಐ ತನಿಖೆ ನಡೆಸಿದ್ರೆ ಷೇರುದಾರರಿಗೆ ಅನುಕೂಲವಾಗುತ್ತೆ ಎಂದು  ಡಾ ಶಂಕರ್ ಗುಹ ತಿಳಿಸಿದರು.

ಮುಂದುವರೆದು ಮಾತನಾಡಿ  “ಸಾಕಷ್ಟು ಹಗರಣಗಳು ನಡೆದಿದೆ ಷೇರುದಾರರಿಗೆ ನ್ಯಾಯ ಸಿಗಬೇಕಿದ್ರೆ ಸಿಬಿಐ ತನಿಖೆ ಆಗಲೇ ಬೇಕು.  ಸಿಬಿಐನ ಎಕನಾಮಿಕಲ್ ವಿಂಗ್ ತನಿಖೆ ನಡೆಸಿದ್ರೆ ಮಾತ್ರ ನ್ಯಾಯ ಸಿಗುತ್ತೆ ಬ್ಯಾಂಕ್ ನಲ್ಲಿ ಹಣವಿಟ್ಟು ಹಣ ಕಳೆದುಕೊಂಡ ಕನಿಷ್ಠ ನೂರು ಮಂದಿ ಸಾವನ್ನಪ್ಪಿದ್ದಾರೆ. ಷೇರುದಾರರಿಗೆ ಹಣ ಮರು ಪಾವತಿ ಮಾಡಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಹಾಯ ಮಾಡ್ಬೇಕು. ಏಪ್ರಿಲ್ ವರೆಗೂ ಅವಕಾಶ ನೀಡುತ್ತೇವೆ.  ಅಷ್ಟರೊಳಗೆ ಸರ್ಕಾರದಿಂದ ಸ್ಪಂಧನೆ ಸಿಗದೆ ಹೋದ್ರೆ ಉಪವಾಸ ಸತ್ಯಗ್ರಹ ಕೈ ಗೊಳ್ಳುತ್ತೇವೆ. ಸಿಬಿಐ ಗೆ ಪ್ರಕರಣ ವರ್ಗಾವಣೆ ಆಗ್ಬೇಕು, ಷೇರುದಾರರಿಗೆ ಹಣ ವಾಪಸ್ಸು ಕೊಡಿಸಬೇಕು, ತಪ್ಪಿತಸ್ಥರು ಜೈಲಿಗೆ ತೆರಳ ಬೇಕು ಎಂದು ಪತ್ರಿಕಾ ಗೋಷ್ಠಿಯಲ್ಲಿ  ತಿಳಿಸಿದರು.

ಜನವರಿ 10 ನೇ ತಾರೀಖಿಗೆ ಹಗರಣ ಬೆಳಕಿಗೆ ಬಂದು 2 ವರ್ಷವಾದ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಪತ್ರ ಚಳುವಳಿ ನಡೆಸಿದ್ದೆವು. ಅದರಲ್ಲಿ ಠೇವಣಿದಾರರ ಸಂಕಷ್ಟಗಳು, ಸ್ಥಳೀಯ ಶಾಸಕರು, ಸಂಸದರ ನಿರ್ಲಕ್ಷ್ಯ ಸೇರಿದಂತೆ ಹಗರಣಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ತಿಳಿಸಲಾಗಿತ್ತು. ಅದಾದ ಬಳಿಕ ಹಗರಣದ ಸೂತ್ರಧಾರ ಕೆ.ರಾಮಕೃಷ್ಣರನ್ನು ED ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಇದು ನಮ್ಮ ಹೋರಾಟಕ್ಕೆ ಮತ್ತೊಂದು ಜಯ ಸಿಕ್ಕಂತಾಗಿದೆ ಎಂದಿದ್ದಾರೆ.

Enforcement Directorate ಅಧಿಕಾರಿಗಳು PMLA (ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್) ಕಾಯ್ದೆಯಡಿಯಲ್ಲಿ ತನಿಖೆಯನ್ನು ಮಾಡುತ್ತಾರೆ. ಇದು ಕೇವಲ ತನಿಖೆಯ ಒಂದು ಭಾಗವಷ್ಟೇ. ಈ ಹಗರಣ ಸುಮಾರು 3 ಸಾವಿರ ಕೋಟಿ ರೂಪಾಯಿಗಳಷ್ಟು ದೊಡ್ಡದಿದೆ. ಈಗ ಅರೆಸ್ಟ್ ಮಾಡಿರುವುದು ಸಮಾಧಾನಕರ ವಿಚಾರ, ಆದರೆ ಇದಕ್ಕೆ ಎರಡು ವರ್ಷಗಳ ಕಾಲ ತಗಲಿದೆ. ಇದು ಪ್ರಶ್ನೆಪತ್ರಿಕೆ ನೀಡಿ ಸಾಕಷ್ಟು ಸಮಯಾವಕಾಶ ಕಲ್ಪಿಸಿಕೊಟ್ಟು ಆನಂತರ ಪರೀಕ್ಷೆ ಬರೆಯಲು ಹೇಳಿದಂತಾಗಿದೆ. ಇದೀಗ ಸರಿಯಾದ ಸಮಯ ಈ ಸಂದರ್ಭದಲ್ಲಿ ಹಗರಣವನ್ನು ED ಮತ್ತು CBI ಜೊತೆಗೆ IT ಸೇರಿ ತನಿಖೆ ನಡೆಸಬೇಕಾದೆ. ತಕ್ಷಣವೇ ಇದು ಕಾರ್ಯಗತಗೊಳಿಸಲು ಇದನ್ನು ಗಂಭೀರವಾಗಿ ಪರಿಗಣಿಸಿ ಮಾನ್ಯ ಮುಖ್ಯ ಮಂತ್ರಿಗಳು ಆದೇಶ ನೀಡಬೇಕು  ಎಂದು ಆಗ್ರಹಿಸಿದರು.

ಇದರ ಸಂಪೂರ್ಣ ತನಿಖೆಯಾಗಬೇಕಾದರೆ CBI ನಿಂದಲೇ ತನಿಖೆ ಮಾಡಿಸಬೇಕು. ಈ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಸಂಸ್ಥಾಪನಾ ಮಂಡಳಿಯ ನಿರ್ದೇಶಕರು, RBI ಅಧಿಕಾರಿಗಳು, RCS ಅಧಿಕಾರಿಗಳು, ಸ್ಥಳೀಯ ರಾಜಕಾರಣಿಗಳು ಇವರೆಲ್ಲರ ಮೇಲೆ ಸಾಕಷ್ಟು ಅನುಮಾನಗಳಿಗೆ. ಯಾವ ಕಾರಣಕ್ಕಾಗಿ ರಾಮಕೃಷ್ಣರನ್ನ ಬಂಧಿಸಲು 2 ವರ್ಷದಷ್ಟು ಸಮಯ ತೆಗೆದುಕೊಳ್ಳಲಾಯಿತು. ಇದರ ಹಿಂದೆ ಯಾರ ಕೈವಾಡವಿದೆ. ಯಾವೆಲ್ಲಾ ರಾಜಕೀಯ ವ್ಯಕ್ತಿಗಳ ಬೆಂಬಲ ಇವರಿಗಿತ್ತು ಎಂಬ ಸತ್ಯ ತನಿಖೆಯಿಂದ ಹೊರಬರಬೇಕಿದೆ ಎಂದು ತಿಳಿಸಿದರು.

ಇದಿಷ್ಟೇ ಅಲ್ಲದೆ ಬಸವನಗುಡಿಯ ಮಾನ್ಯ ಶಾಸಕರಾದ ಶ್ರೀ ರವಿಸುಬ್ರಮಣ್ಯ ಅವರು ಅಧಿವೇಶನದ ವೇಳೆ ಸದನದಲ್ಲಿ ಮಾತನಾಡುತ್ತಾ ಹಗರಣಕ್ಕೆ ಸಂಬಂಧಿಸಿದಂತೆ 24 ಜನರ ಕ್ರಮ ಕೈಗೊಳ್ಳಬೇಕೆಂದು ತಿಳಿಸಿರುತ್ತಾರೆ. ಆ 24 ಜನರ ಪೈಕಿ ಯಾರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಸಿಬಿಐ ತನಿಖೆಯಿಂದಷ್ಟೇ ಸತ್ಯ ಬಹಿರಂಗವಾಗಬೇಕಾಗಿದೆ. ಯಾವ ರೀತಿ ಜನರ ದುಡ್ಡನ್ನು ದುರುಪಯೋಗ ಮಾಡಿದ್ದಾರೆ ಎಂಬುದು ಜನರಿಗೆ ತಿಳಿಸಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡುವ ಮೂಲಕ ಮತ್ತೆ ಈ ತರಹದ ಹಗರಣಗಳನ್ನು ಯಾರೂ ಮಾಡದಂತೆ ಒಂದು ಸಂದೇಶವನ್ನು ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಡಬೇಕಾಗಿದೆ ಎಂದು ಹೇಳಿದರು.

        ಇತ್ತೀಚಿಗಷ್ಟೇ ಮಾನ್ಯ ಸಹಕಾರ ಸಚಿವರು ವಿಧಾನಸೌಧದ ಅವರ ಕಚೇರಿಯಲ್ಲಿ ಗುರು ರಾಘವೇಂದ್ರ ಬ್ಯಾಂಕ್ ಮತ್ತು ವಸಿಷ್ಠ ಸೌಹಾರ್ದ ಸೊಸೈಟಿಯ ಬಗ್ಗೆ ಮಾತನಾಡಲು ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಕೆಲವು ಶಾಸಕರುಗಳು RBI ಅಧಿಕಾರಿಗಳು RCS ಅಧಿಕಾರಿಗಳು ಭಾಗವಹಿಸಿದ್ದರು. ಆದರೆ ಇದರಲ್ಲಿ ಬಹುಮುಖ್ಯವಾಗಿ ಇರಬೇಕಿದ್ದವರು ಠೇವಣಿದಾರರು ಆದೆ ಅವರಿಗೆ ಭಾಗವಹಿಸಲು ಅವಕಾಶವೇ ಇರಲಿಲ್ಲ.  ಇಂತಹ ಸಭೆಗಳಲ್ಲಿ ಸಂಕಷ್ಟದಲ್ಲಿರುವ ಠೇವಣಿದಾರರರ ಭಾವನೆಗಳನ್ನು ಅರಿತುಕೊಂಡು ಅವರಿಗೆ ಉಪಯೋಗವಾಗುವಂತಹ ಪರಿಹಾರವನ್ನು ಕೊಡಬೇಕೇ ಹೊರತು ನಿಮಗೆ ಅನುಕೂಲವಾಗುವಂತಹ ಪರಿಹಾರವನ್ನು ಠೇವಣಿದಾರರ ಮೇಲೆ ಹೇರಬಾರದು. ಅಷ್ಟೇ ಅಲ್ಲದೆ ಯಾವ ವಿಷಯವನ್ನು ಮುಚ್ಚಿಡುವುದಕ್ಕಾಗಿ ಠೇವಣಿದಾರರು ಇಂಥ ಸಭೆಗೆ ಕರೆಯುತ್ತಿಲ್ಲ ಎಂದರು.

        ನಾವು ಸಿಬಿಐ ತನಿಖೆಗೆ ಒತ್ತಾಯಿಸುತ್ತಿರುವುದು ಏಕೆಂದರೆ ಇವತ್ತು ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿರುವಂತಹ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನಲ್ಲಿ 2400 ಕೋಟಿ ಹಗರಣ, ಗುರುಸಾರ್ವಭೌಮ ಸೊಸೈಟಿಯಲ್ಲಿ 270 ಕೋಟಿ ಹಗರಣ, ನಾಗರತ್ನ ಸೌಹಾರ್ದ ಸೊಸೈಟಿಯಲ್ಲಿ 150 ಕೋಟಿ ಹಗರಣ, ಕಣ್ವ ಸೌಹಾರ್ದ ಸೊಸೈಟಿಯಲ್ಲಿ ನೂರು ಕೋಟಿ ಹಗರಣ, ವಸಿಷ್ಠ ಸೌಹಾರ್ದ ಸೊಸೈಟಿಯಲ್ಲಿ ಸುಮಾರು 500 ಕೋಟಿ ಹಗರಣ ನಡೆದಿವೆ.  ಇವಿಷ್ಟೇ ಅಲ್ಲದೆ ಸಂಸದರಾಗಲಿ, ಶಾಸಕರಾಗಲಿ ಹೇಳದೇ ಇರುವಂತಹ ಮತ್ತೊಂದು ವಿಷಯವೆಂದರೆ ಗುರುರಾಘವೇಂದ್ರ ಬ್ಯಾಂಕಿನಲ್ಲಿ ಸುಮಾರು 120 ಸೊಸೈಟಿಗಳು ಠೇವಣಿ ಇಟ್ಟಿವೆ. DICGC ವಿಮೆಯ ಹಣ ಈ ಸಂಸ್ಥೆಗಳಿಗೆ ಸಿಗುವುದಿಲ್ಲ. ಈ ಸೊಸೈಟಿಗಳ ಠೇವಣಿದಾರರು ಯಾವುದೇ ಪರಿಹಾರ ಸಿಗದೆ ಕಂಗಾಲಾಗಿದ್ದಾರೆ. ಈ ಎಲ್ಲಾ ಪ್ರಕರಣಗಳು ಸಂಪೂರ್ಣ ತನಿಖೆಯಾಗಿ ತಪಿತಸ್ಥರಿಗೆ ಶಿಕ್ಷೆ ಕೊಡಿಸುವ ಜೊತೆಗೆ ನೊಂದ ಠೇವಣಿದಾರರಿಗೆ ನ್ಯಾಯ ಕೊಡಿಸಬೇಕಿದೆ. ಇದೆಲ್ಲಾ ಆಗಬೇಕಾದರೆ CBI ನಿಂದಲೇ ತನಿಖೆ ಆಗಬೇಕಿದೆ ಎಂದು ಆಗ್ರಹಿಸಿದರು.

ಇಷ್ಟೊಂದು ಹಗರಣಗಳು ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿದ್ದು ಇದೆಲ್ಲಾ ಪ್ರಕರಣಗಳು ಸ್ಥಳೀಯ ಶಾಸಕರು ಮತ್ತು ಸಂಸದರು ತಮ್ಮ ಗಮನಕ್ಕೆ ಬಂದರೂ ಕಂಡೂ ಕಾಣದಂತೆ ಇದ್ದಾರೆ. ಜನಪ್ರತಿನಿಧಿಗಳು ಜನರ ಪರ ನಿಂತು ಹೋರಾಟ ಮಾಡಿ ಜನರಿಗೆ ನ್ಯಾಯ ಒದಗಿಸಿಕೊಡಬೇಕಿತ್ತು. ಆದರೆ ಅವರು ಅದರಲ್ಲಿ ವಿಫಲರಾಗಿದ್ದಾರೆ. ಅವರು ಮಾಡಬೇಕಿದ್ದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಈ ಹೋರಾಟದಿಂದ ಹಿಂದೆ ಸರಿಯುವಂತೆ ಹಲವು ಕಡೆಗಳಿಂದ ಬೇರೆ ಬೇರೆ ರೀತಿಯ ಒತ್ತಡಗಳು ಬಂದರೂ ಅಂತಹ ಒತ್ತಡಗಳಿಗೆ ಹೆದರದೆ ನಾನು ನನ್ನ ಹೋರಾಟವನ್ನು ನಡೆಸುತ್ತಾ ಬಂದಿದ್ದೇನೆ.

ಈ ಪ್ರಕರಣಗಳು ಒಂದಕ್ಕೊಂದು ಕೊಂಡಿಯಾಗಿ ಬೆಳೆದುಕೊಂಡಿದೆ ಗುರು ರಾಘವೇಂದ್ರ ಬ್ಯಾಂಕ್ ನಿಂದ ಗುರು ಸಾರ್ವಭೌಮ ಸೊಸೈಟಿ ಅಲ್ಲಿಂದ ವರಿಷ್ಠ ಸೌಹಾರ್ದ ಮತ್ತು ನಾಗರತ್ನ, ಕಣ್ವ ಹೀಗೆ ಉದ್ದಕ್ಕೂ ಬೆಳೆದುಕೊಂಡು ಹೋಗುತ್ತಿವೆ. ಈಗಾಗಲೇ  ಒಂದಿಷ್ಟು ಜನರಿಗೆ ಭಯ ಶುರುವಾಗುತ್ತಿರಬಹುದು. ರಾಮಕೃಷ್ಣ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಅಷ್ಟೇ 840 ಕೋಟಿ ಎಲ್ಲಿ ಹೋಗಿದೆ ಯಾರು ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನುವುದು ಬಹಿರಂಗವಾಗಬೇಕಾಗಿದೆ. ಇದರಲ್ಲಿ ರಾಜಕೀಯ ವೈಕ್ತಿಗಳ, ದೊಡ್ಡ ದೊಡ್ಡ ಅಧಿಕಾರಿಗಳ, ಪ್ರಮುಖ ಉದ್ಯಮಿಗಳ ಕೈವಾಡ ಇರುವುದು ಬಯಲಾಗಬೇಕಾಗಿದೆ. ಸ್ಥಳೀಯ ರಾಜಕೀಯ ಮುಖಂಡರ ಬೆಂಬಲ ಇಲ್ಲದೇ ಈ ವಿಷಯ ಇಷ್ಟರ ಮಟ್ಟಿಗೆ ಬೆಳೆಯಲು ಸಾಧ್ಯವಿರಲಿಲ್ಲ ತನಿಖೆಗೆ ಇಷ್ಟು ವಿಳಂಬವೂ ಆಗುತ್ತಿರಲಿಲ್ಲ. ಇನ್ನು ಮುಂದೆ ಅಚ್ಚರಿಯ ಬೆಳವಣಿಗಳಾಗುತ್ತದೆ. ತನಿಖೆ ಬೇಗ CBI ಗೆ ಹೋಗುತ್ತದೆ ಎಂಬ ನಂಬಿಕೆ ನನಗಿದೆ. ಠೇವಣಿದಾರರಿಗೆ ಕಟ್ಟಕಡೆಯ ಒಂದು ರೂಪಾಯಿ ಬರುವವರೆಗೂ, ಎಲ್ಲಾ ತಪ್ಪಿತಸ್ಥರಿಗೆ ಶಿಕ್ಷೆ ಆಗುವ ವರೆಗೂ ನನ್ನ ಹೋರಾಟ ಮುಂದುವರೆಯುತ್ತದೆ. ಎಂದು ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್‌ ಬ್ಯಾಂಕ್‌ ಷೇರುದಾರರು & ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮುಖ್ಯ ಪೋಷಕರಾದ ಡಾ. ಶಂಕರ ಗುಹಾ ದ್ವಾರಕನಾಥ್‌ ಬೆಳ್ಳೂರು ತಿಳಿಸಿದರು.

Tags: Co-operative bankkarnatakasri raghavendra co -operative
ShareTweetSendShare
Join us on:

Related Posts

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

by Shwetha
February 19, 2026
0

ಚುನಾವಣಾ ಆಯೋಗ ರಾಜ್ಯಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ್ದು, ಮಾರ್ಚ್ 16ರಂದು ಮತದಾನ ನಡೆಯಲಿದೆ. ಒಟ್ಟು 10 ರಾಜ್ಯಗಳ 37 ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ...

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

by Shwetha
February 19, 2026
0

ರಾಜ್ಯದ ರೈತ ಸಮುದಾಯಕ್ಕೆ ಇಲ್ಲಿದೆ ಒಂದು ಸಂತಸದ ಸುದ್ದಿ. ಜಮೀನುಗಳಿಗೆ ಹೋಗಲು ದಾರಿ ಇಲ್ಲದೆ ಪರದಾಡುತ್ತಿದ್ದ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಐತಿಹಾಸಿಕ ಮತ್ತು ಮಹತ್ವದ...

ಬಂಗಾರದ ಬೆಲೆ ಅರ್ಧಕ್ಕರ್ಧ ಇಳಿಕೆಯಾಗುವ ಸಾಧ್ಯತೆ ಹೂಡಿಕೆದಾರರಿಗೆ ತಜ್ಞರು ನೀಡಿದ ಮಹತ್ವದ ಸಲಹೆ ಏನು ಗೊತ್ತಾ?

ಬಂಗಾರದ ಬೆಲೆ ಅರ್ಧಕ್ಕರ್ಧ ಇಳಿಕೆಯಾಗುವ ಸಾಧ್ಯತೆ ಹೂಡಿಕೆದಾರರಿಗೆ ತಜ್ಞರು ನೀಡಿದ ಮಹತ್ವದ ಸಲಹೆ ಏನು ಗೊತ್ತಾ?

by Shwetha
February 19, 2026
0

ಬಂಗಾರ ಎಂದರೆ ಭಾರತೀಯರಿಗೆ ಎಲ್ಲಿಲ್ಲದ ಪ್ರೀತಿ. ಶುಭ ಸಮಾರಂಭಗಳಿಗೆ, ಮದುವೆ ಮುಂಜಿಗಳಿಗೆ ಚಿನ್ನದ ಆಭರಣ ಕೊಳ್ಳುವುದು ಒಂದು ಸಂಪ್ರದಾಯವಾದರೆ, ಕಷ್ಟಕಾಲಕ್ಕೆ ಆಗಲಿ ಎಂದು ಹಳದಿ ಲೋಹದ ಮೇಲೆ...

ಮಾ.5ರಂದು ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ… ಬಾಕಿ ಬಿಲ್ ಬಿಡುಗಡೆಗೆ ಆಗ್ರಹ

ಮಾ.5ರಂದು ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ… ಬಾಕಿ ಬಿಲ್ ಬಿಡುಗಡೆಗೆ ಆಗ್ರಹ

by Shwetha
February 19, 2026
0

ರಾಜ್ಯ ಗುತ್ತಿಗೆದಾರರ ಸಂಘವು ಬಾಕಿ ಬಿಲ್‌ಗಳ ಬಿಡುಗಡೆಗೆ ಆಗ್ರಹಿಸಿ ಮಾರ್ಚ್ 5ರಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಕುರಿತು ಸಂಘದ ಅಧ್ಯಕ್ಷ ಆರ್. ಮಂಜುನಾಥ್...

ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆಯಬೇಕಿತ್ತು: ಪಾಕ್ ಹಾಕಿ ತಂಡದ ನಾಯಕ ಗಂಭೀರ ಆರೋಪ

ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆಯಬೇಕಿತ್ತು: ಪಾಕ್ ಹಾಕಿ ತಂಡದ ನಾಯಕ ಗಂಭೀರ ಆರೋಪ

by Shwetha
February 19, 2026
0

ಆಸ್ಟ್ರೇಲಿಯಾ ಪ್ರವಾಸದಿಂದ ಹಿಂದಿರುಗಿದ ಬಳಿಕ ಪಾಕಿಸ್ತಾನ ಹಾಕಿ ತಂಡದ ನಾಯಕ ಶಕೀಲ್ ಅಹ್ಮದ್ ಪಾಕಿಸ್ತಾನ ಹಾಕಿ ಫೆಡರೇಶನ್ (PHF) ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ತಂಡದ ನಿರ್ವಹಣೆಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram