ಅದು ಯಾವ ಕ್ರೀಡೆಯೇ ಆಗಿರಲಿ. ಭಾರತ ಮತ್ತು ಪಾಕಿಸ್ತಾನ ಅಂದ್ರೆ ಆ ಸ್ಪರ್ಧೆಯ ರೋಚಕತೆಯೇ ಬೇರೆ. ಇಲ್ಲಿ ಸೋಲು – ಗೆಲುವಿನ ಫಲಿತಾಂಶಕ್ಕಿಂತ ದೇಶಾಭಿಮಾನದ ಪ್ರತಿಷ್ಠೆಯೇ ಮೇಳೈಸುತ್ತದೆ. ಹಾಗಾಗಿ ನೆರೆಹೊರೆಯವರ ನಡುವಿನ ಜಿದ್ದಾಜಿದ್ದಿನ ಸ್ಪರ್ಧೆ ಇಡೀ ಜಗತ್ತಿನ ಗಮನ ಸೆಳೆಯುತ್ತದೆ.
ಇದೀಗ ಕಾಮನ್ವೆಲ್ತ್ ಗೇಮ್ಸ್ ಅಖಾಡದ ಜಾವೆಲಿನ್ ಸ್ಪರ್ಧೆಯನ್ನು ಕೋಟಿ ಕಂಗಳು ಕಾತರದಿಂದ ಕಾಯುತ್ತಿವೆ. ಅದಕ್ಕೆ ಕಾರಣ ಭಾರತದ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ ಕಣದಲ್ಲಿರುವುದು.
2018ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ 86.47 ಮೀಟರ್ ದೂರ ಎಸೆದ ನೀರಜ್ ಚಿನ್ನ ಗೆದ್ದಿಕೊಂಡಿದ್ರೆ, ನದೀಮ್ 76.02 ಮೀಟರ್ ದೂರ ಎಸೆದು ನಿರಾಸೆ ಅನುಭವಿಸಿದ್ದ
ಬಳಿಕ 2022ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಗಾಯದ ಸಮಸ್ಯೆಯಿಂದ ಚೋಪ್ರಾ ಸ್ಪರ್ಧೆ ಮಾಡಿರಲಿಲ್ಲ. ಆದ್ರೆ ಅರ್ಷದ್ ನದೀಮ್ 90.18 ಮೀಟರ್ ದೂರ ಎಸೆದು ಬಂಗಾರ ಗೆದ್ದುಕೊಂಡಿದ್ದ.
ಇದೀಗ ಕಾಮನ್ವೆಲ್ತ್ ಅಖಾಡದಲ್ಲಿ ಮತ್ತೆ ಇಬ್ಬರು ಕಣದಲ್ಲಿದ್ದಾರೆ.ವಿಶ್ವದ ಶ್ರೇಷ್ಠ ಈಟಿ ಎಸೆತಗಾರರ ನಡುವಿನ ಸ್ಪರ್ಧೆಯಲ್ಲಿ ಯಾರು ಗೆಲ್ಲಬಹುದು..?
ಈ ಹಿಂದಿನ ಅಂಕಿ ಅಂಶಗಳ ಪ್ರಕಾರ ಇಬ್ಬರು ಕೂಡ ಸಮಬಲದ ಹೋರಾಟವನ್ನೇ ನೀಡಿದ್ದಾರೆ. ವೈಯಕ್ತಿಕ ದಾಖಲೆಯ ಪ್ರಕಾರ ನದೀಮ್ ಒಂದು ಹೆಜ್ಜೆ ಮುಂದಿದ್ದಾನೆ. ಆದ್ರೆ ಸ್ಥಿರ ಪ್ರದರ್ಶನ ನೀಡದಿರುವುದು ಆತನ ವೀಕ್ನೆಸ್. ಆದ್ರೂ ಪ್ರಮುಖ ಸ್ಪರ್ಧೆಗಳಲ್ಲಿ ಒಂದು ಶ್ರೇಷ್ಠ ಎಸೆತದಿಂದ ಸ್ಪರ್ಧೆಯ ಫಲಿತಾಂಶವನ್ನೇ ಬುಡಮೇಲು ಮಾಡ್ತಾನೆ. ವೈಯಕ್ತಿಕ ಶ್ರೇಷ್ಠ ಸಾಧನೆ 92.97 ಮೀಟರ್.
ಆದ್ರೆ ಚೋಪ್ರಾ ಹಾಗಲ್ಲ. ಸ್ಥಿರ ಪ್ರದರ್ಶನ ನೀಡುತ್ತಿರುವುದು ಪ್ಲಸ್ ಪಾಯಿಂಟ್. 2025ರ ದೋಹಾ ಡೈಮಂಡ್ ಲೀಗ್ನಲ್ಲಿ 90.23 ದೂರ ಎಸೆದಿರುವುದು ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.
ನೀರಜ್ ಚೋಪ್ರಾ ಸಾಧನೆ-
2018 ಕಾಮನ್ವೆಲ್ತ್ ಗೇಮ್ಸ್ – ಚಿನ್ನ
2020- ಟೋಕಿಯೊ ಒಲಿಂಪಿಕ್ಸ್ -ಚಿನ್ನ
2023- ವಿಶ್ವ ಚಾಂಪಿಯನ್ಷಿಪ್ – ಚಿನ್ನ
2024- ಪ್ಯಾರಿಸ್ ಒಲಿಂಪಿಕ್ಸ್ – ಬೆಳ್ಳಿ
ಅರ್ಷದ್ ನದೀಮ್ ಸಾಧನೆ
2022 ಕಾಮನ್ವೆಲ್ತ್ ಗೇಮ್ಸ್ – ಚಿನ್ನ
2023- ವಿಶ್ವ ಚಾಂಪಿಯನ್ಷಿಪ್ – ಬೆಳ್ಳಿ
2024- ಪ್ಯಾರಿಸ್ ಒಲಿಂಪಿಕ್ಸ್ – ಚಿನ್ನ
ಆದ್ರೆ 2025ರ ವಿಶ್ವ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಇಬ್ಬರು ಕೂಡ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ನೀರಜ್ 84.03 ಮೀಟರ್ ದೂರ ಎಸೆದು 8ನೇ ಸ್ಥಾನ ಪಡೆದಿದ್ರೆ, ನದೀಮ್ಗೆ 10ನೇ ಸ್ಥಾನ .
ಇದೀಗ ಇಬ್ಬರು ಸಮಬಲದ ಸ್ಪರ್ಧಿಗಳ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಅರ್ಹತಾ ಸುತ್ತು ಇಂದಿನಿಂದ ಆರಂಭವಾಗಲಿದೆ. ಫೈನಲ್ ಆಗಸ್ಟ್ 1ರಂದು ನಡೆಯಲಿದೆ.
ಹಾಗಾದ್ರೆ ಯಾರು ಗೆಲ್ಲಬಹುದು.. ? ಆದ್ರೆ ಇಲ್ಲಿ ಹಳೆಯ ದಾಖಲೆಗಳು, ಅಂಕಿ ಅಂಶಗಳು ಲೆಕ್ಕಕ್ಕೆ ಬರಲ್ಲ. ಆ ದಿನ, ಆ ಕ್ಷಣದ ನಿಖರವಾದ ಒಂದೇ ಒಂದು ಎಸೆತ ಅಷ್ಟೇ..!
ಆಲ್ ದಿ ಬೆಸ್ಟ್..!
ಸನತ್ ರೈ








