ಉಕ್ರೇನ್ ತೊರೆಯುವಂತೆ ಭಾರತೀಯರಿಗೆ ಸೂಚನೆ ನೀಡಿದ ರಾಯಭಾರ ಕಚೇರಿ Saaksha Tv
ಉಕ್ರೇನ್: ಉಕ್ರೇನ್ ನಲ್ಲಿರು ಭಾರತೀಯ ರಾಯಭಾರ ಕಚೇರಿಯು ಭಾರತೀಯರಿಗೆ ಉಕ್ರೇನ್ ತೊರೆಯುವಂತೆ ಸೂಚನೆ ನೀಡಿದೆ.
ರಷ್ಯಾ ಮತ್ತು ಉಕ್ರೇನ್ ಉದ್ವಿಗ್ನತೆ ತೀರ್ವಗೊಳ್ಳುತ್ತಿದ್ದು, ಯುದ್ದ ನಡುವೆಯುವುದು ಭಾಗಶಃ ಖಚಿತ ಎನ್ನಲಾಗುತ್ತಿದೆ. ಈ ಕಾರಣದಿಂದ ಉಕ್ರೇನ್ ನ ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ದೇಶದಿಂದ ಹೊರಹೋಗುವಂತೆ ಅಧಿಸೂಚನೆ ಕಳುಹಿಸಿದೆ ಎಂದು ಖಾಸಗಿ ಸುದ್ದಿ ವಾಹಿನಿ ವರದಿ ಮಾಡಿದೆ.
ಉಕ್ರೇನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯು ಗಂಭೀರವಾಗಿದ್ದು, ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳು, ತಾತ್ಕಾಲಿಕವಾಗಿ ಉಕ್ರೇನ್ ನಿಂದ ಹೊರಹೋಗಬೇಕು. ಭಾರತೀಯ ಪ್ರಜೆಗಳು ಉಕ್ರೇನ್ ದೇಶದ ಒಳಗೆ ಅನವಶ್ಯಕವಾಗಿ ಪ್ರಯಾಣ ಮಾಡಬಾರದು. ಎಂದು ರಾಯಭಾರ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯರು ತಮ್ಮ ಉಪಸ್ಥಿತಿಯ ಸ್ಥಿತಿಯ ಬಗ್ಗೆ ಭಾರತೀಯ ಪ್ರಜೆಗಳು ರಾಯಭಾರ ಕಚೇರಿಗೆ ತಿಳಿಸಲು ವಿನಂತಿಸಲಾಗಿದೆ. ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಎಲ್ಲಾ ಸೇವೆಗಳನ್ನು ರಾಯಭಾರ ಕಚೇರಿಯು ನೀಡಿತ್ತಿದೆ ಎಂದು ಖಾಸಗಿ ಸುದ್ದಿ ವಾಹಿನಿ ತಿಳಿಸಿದೆ.








