Hijab Controvercy : ವಿಚಾರಣೆ ನಾಳೆಗೆ ಮುಂದೂಡಿದ ಹೈ ಕೋರ್ಟ್
ರಾಜ್ಯದಲ್ಲಿ ಹಿಜಾಬ್ – ಕೇಸರಿ ಸಂಘರ್ಷ ಭುಗಿಲೆದ್ದಿದ್ದು , ಹೈಕೋರ್ಟ್ ನಲ್ಲಿ ಹಿಜಬ್ ಧಾರಣೆಗೆ ಅನುಮತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನ ನಡೆಸಿದ ತ್ರಿಸದಸ್ಯ ಪೀಠವು ಮತ್ತೊಮ್ಮೆ ಅರ್ಜಿ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2 30 ಕ್ಕೆ ಮುಂದೂಡಿದೆ. ಇನ್ನೂ ಇಂದೂ ಸಹ ಕೋರ್ಟ್ ನ ಮಧ್ಯಂತರ ಆದೇಶವನ್ನೂ ಉಲ್ಲಂಘಿಸಿ , 144 ಜಾರಿ ನಡುವೆಯೂ ರಾಜ್ಯದ ಅನೇಕ ಕಡೆ ವಿದ್ಯಾರ್ಥಿನಿಯರು ಹೈಜಾಬ್ ಗಾಗಿ ಪ್ರತಿಭಟನೆ ನಡೆಸಿರುವುದು ಕಂಡುಬಂದಿದೆ..
ಹಿಜಬ್ ನಿಷೇಧ ಮಾಡಿದವರ ಮನೆಯನ ಹಾಳಾಗಿ ಹೋಗಲಿ ಎಂದು ತುಂಬಾ ಕೆಟ್ಟ ಪದಗಳನ್ನ ಬಳಸಿ ಬೈದು ವಿದ್ಯಾರ್ಥಿನಿಯರು ಆಕ್ರೋಶ ಹೊರಹಾಕಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ..
ಚಿಕ್ಕಮಗಳೂರಿನ ಬಸವನಹಳ್ಳಿ ಪ್ರೌಢ ಶಾಲೆಯಲ್ಲಿ ಹಿಜಬ್ ಸಂಘರ್ಷ ತಾರಕಕ್ಕೇರಿತ್ತು.. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಶಾಲೆಗೆ ಅವಕಾಶ ನೀಡಿಲ್ಲ.. ನಂತರ ಫೋಷಕರ ಜೊತೆ ಮಕ್ಕಳು ಸೇರಿ ರಸ್ತೆ ಮಧ್ಯೆಯೇ ಪ್ರತಿಭಟನೆ ನಡೆಸಿದ್ದಾರೆ…
144 ಸೆಕ್ಷನ್ ಜಾರಿಯಲ್ಲಿದ್ದರೂ ಮಕ್ಕಳು ಬಸವನಹಳ್ಳಿ ಮುಖ್ಯ ರಸ್ತೆ ನಡುವೆ ಕೂತು ಹಿಜಬ್ ಗಾಗಿ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ… ನಂತರ ಪ್ರತಿಭಟಿಸುತ್ತಿದ್ದ ಮಕ್ಕಳನ್ನ ಪೋಷಕರು ದರ್ಗಾದೊಳಗೆ ಕರೆದೊಯ್ದಿದ್ದಾರೆ..
ಗದಗದಲ್ಲೂ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಹಿಜಾಬ್ ಹಗ್ಗಹಗ್ಗಾಟ ಮುಂದುವರೆದಿದೆ. ಹಳೆ ಕೋರ್ಟ್ ಆವರಣದಲ್ಲಿ ಇರೋ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಬಳಿ ಹಿಜಾಬ್ ಹೈ ಡ್ರಾಮಾ ನಡೆದಿದೆ. ವಿದ್ಯಾರ್ಥಿನಿಯರು ಇಂದೂ ಸಹ ಹಿಜಾಬ್ ಹಾಕಿಕೊಂಡು ಬಂದಿದ್ದರು.. ಹಿಜಾಬ್ ಹಾಕಿಕೊಂಡು ಕ್ಲಾಸ್ ನಲ್ಲಿ ಕೂರುತ್ತೇವೆಂದು ವಿದ್ಯಾರ್ಥಿನಿಯರ ಪಟ್ಟು ಹಿಡಿದಿದ್ದಾರೆ.. ಆದ್ರೆ ಹೈ ಕೋರ್ಟ್ ಆದೇಶ ಸರ್ಕಾರದ ಸೂಚನೆ ಹಿನ್ನೆಲೆ ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಕಾಲೇಜು ಆಡಳಿತ ಮಂಡಳಿ ಅವಕಾಶ ನೀಡಿಲ್ಲ.
ಯಾದಗಿರಿಯ ನ್ಯೂ ಕನ್ನಡ ಕಾಲೇಜ್ ಮುಂಭಾಗದಲ್ಲಿ ಹಿಜಾಬ್ ಗಾಗಿ ವಿದ್ಯಾರ್ಥಿನಿಯರು ಹೈಡ್ರಾಮಾ ನಡೆಸಿದ್ದಾರೆ… ಯಾದಗಿರಿಯ ನಗರದ ಕನಕ ವೃತ್ತದ ಸಮೀಪದಲ್ಲಿರುವ ನ್ಯೂ ಕನ್ನಡ ಕಾಲೇಜ್ ಮುಂಭಾಗದಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಗೆ ಪಟ್ಟು ಹಿಡಿದು ಆಕ್ರೋಶ ಹೊರ ಹಾಕಿದ್ಧಾರೆ… ಹಿಜಾಬ್ ಧರಿಸಿ ಕಾಲೇಜ್ ಒಳಗಡೆ ಬಿಡದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ವಿದ್ಯಾರ್ಥಿಗಳಿಗೆ ಪೋಷಕರು ಕೂಡ ಸಾಥ್ ನೀಡಿದ್ದು ಕಂಡುಬಂದಿದೆ.









