Ranaji| ಸಿದ್ಧಾರ್ಥ್ ಹಾಗೂ ಮನೀಷ್ ಶತಕ : ಬೃಹತ್ ಮೊತ್ತದತ್ತ ಕರ್ನಾಟಕ
ಇಂದಿನಿಂದ ರಣಜಿ ಸಮರ ಆರಂಭವಾಗಿದ್ದು, ಚೆನ್ನೈನ ಇಂಡಿಯಾ ಸಿಮೆಂಟ್ ಲಿಮಿಟೆಡ್ ಗುರುನಾನಕ್ ಕಾಲೇಜು ಮೈದಾನದಲ್ಲಿ ಕರ್ನಾಟಕ ತಂಡ, ತಮಿಳುನಾಡು ತಂಡವನ್ನು ಎದುರಿಸಿದೆ.
ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದು ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ.
ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್(16) ರನೌಟ್ ಬಲೆಗೆ ಬಿದ್ದರೆ. ದೇವದತ್ ಪಡಿಕ್ಕಲ್(21) ಔಟಾದರು.
ನಂತರ ಬಂದ ಆರ್. ಸಮರ್ಥ್(47), ಶ್ರೀನಿವಾಸ್ ಸಿದ್ಧಾರ್ಥ್(5) ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು.
ಈ ಹಂತದಲ್ಲಿ ಜವಾಬ್ದಾರಿಯು ಆಟದಿಂದ ತಂಡಕ್ಕೆ ಆಸರೆಯಾದ ಕೆ. ಸಿದ್ಧಾರ್ಥ್ ಹಾಗೂ ಮನೀಷ್ ಪಾಂಡೆ, ಶತಕ ಸಿಡಿಸಿ ಮಿಂಚಿದರು.
ಅಲ್ಲದೇ 4ನೇ ವಿಕೆಟ್ ಜೊತೆಯಾಟದಲ್ಲಿ 267 ರನ್ ಗಳ ಜೊತೆಯಾಟದ ಮೂಲಕ ತಂಡವನ್ನು ಸುಭದ್ರ ಸ್ಥಿತಿಯಲ್ಲಿ ನಿಲ್ಲಿಸಿದರು.
ಪರಿಣಾಮ ಮೊದಲ ದಿನದ ಅಂತ್ಯಕ್ಕೆ ಕರ್ನಾಟಕ, 5 ವಿಕೆಟ್ ನಷ್ಟಕ್ಕೆ 392 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ.
ಮನೋಷ್ ಪಾಂಡೆ 156 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ನಾಯಕನಿಗೆ ಉತ್ತಮ ಸಾಥ್ ನೀಡಿದ ಸಿದ್ಧಾರ್ಥ್(140*) ರನ್ ಗಳಿಸಿ ಕಣದಲ್ಲಿದ್ದಾರೆ.









