ಶ್ರೀನಗರದಲ್ಲಿ ನಿಗೂಢ ಬಾಂಬ್ ಸ್ಪೋಟ್ | ಅಂಗಡಿಯೊಂದು ಹಾನಿಯಾಗಿದೆ Saaksha Tv
ಜಮ್ಮು-ಕಾಶ್ಮೀರ : ಶ್ರೀನಗರದ ಖವಾಜಾ ಬಜಾರ್ ಪ್ರದೇಶದಲ್ಲಿ ನಿಗೂಢ ಸ್ಫೋಟವೊಂದು ಸಂಭವಿಸಿದೆ.
ಮಧ್ಯಾಹ್ನ ಶ್ರೀನಗರದ ನೊವಟ್ಟಾ ವಲಯದ ಕಜ್ವಾ ಬಜಾರದ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ ಅಂಗಡಿಯೊಂದಕ್ಕೆ ಹಾನಿಯಾಗಿದೆ. ಮತ್ತು ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಸಿದ್ದಾರೆ.
ಇದು ಪಾಕಿಸ್ತಾನ ಸೇನೆ ಅಥವಾ ಉಗ್ರಗಾಮಿಗಳು ನಡೆಸಿದ ಗ್ರೆನೇಡ್ ದಾಳಿಯಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶ್ರೀನಗರದಲ್ಲಿ ಭಾರತೀಯ ಸೇನಾಪಡೆಗಳು ಉಗ್ರರನ್ನ ಮಟ್ಟ ಹಾಕುತ್ತಿರುವ ಹಿನ್ನೆಲೆ ಸಿಆರ್‌ಪಿಎಫ್ ಯೋಧರ ನೆಲೆಯ ಮೇಲೆ ಗ್ರೆನೇಡ್ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ.
ಇದೇ ರೀತಿಯಾಗಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಕೀಗಾಮ್ ಗ್ರಾಮದಲ್ಲಿ ಉಗ್ರರು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯ ಮೇಲೆ ಗ್ರೆನೇಡ್ ದಾಳಿ ನಡೆದಿತ್ತು.