Rohit Sharma | ರೋಹಿತ್ ಶರ್ಮಾ ಟೀಂ ಇಂಡಿಯಾದ ಟೆಸ್ಟ್ ನಾಯಕ Rohit-sharma-named-indias-test-captain saaksha tv
ನಿರೀಕ್ಷೆಯಂತೆ ಟೀಂ ಇಂಡಿಯಾದ ಸೀಮಿತ ಓವರ್ ಗಳ ನಾಯಕರಾಗಿದ್ದ ರೋಹಿತ್ ಶರ್ಮಾ ಅವರನ್ನ ಟೆಸ್ಟ್ ತಂಡದ ನಾಯಕರಾಗಿ ಬಿಸಿಸಿಐ ನೇಮಕ ಮಾಡಿದೆ.
ಈ ಕುರಿತು ಆಯ್ಕೆ ಸಮಿತಿ ಸ್ಪಷ್ಟನೆ ನೀಡಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಇಂದು ತಂಡ ಪ್ರಕಟವಾಗಿದ್ದು, ರೋಹಿತ್ ಶರ್ಮಾ ಟೀಂ ಇಂಡಿಯಾದ ಫುಲ್ ಟೈಮ್ ನಾಯಕರಾಗಿದ್ದಾರೆ.
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿ ಸೋತ ಬಳಿಕ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಗುಡ್ ಬೈ ಹೇಳಿದರು.
ಇದರಿಂದಾಗಿ ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ಯಾರು ಎಂಬ ಪ್ರಶ್ನೆ ಮುನ್ನಲೆಗೆ ಬಂತು. ಎಲ್ಲರಿಗೂ ಗೊತ್ತಿರುವಂತೆ ರೋಹಿತ್ ಶರ್ಮಾ ಅವರೇ ನಾಯಕರಾಗುತ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು.
ಆದ್ರೆ ಕ್ಯಾಪ್ಟನ್ ರೇಸ್ ನಲ್ಲಿ ಹಲವು ಹೆಸರುಗಳು ಕೇಳಿಬಂದರು. ಕನ್ನಡಿಗ ಕೆ.ಎಲ್.ರಾಹುಲ್. ರಿಷಬ್ ಪಂತ್, ಜಸ್ಪ್ರೀತ್ ಬೂಮ್ರಾ ಹೀಗೆ ಕೆಲ ಹೆಸರುಗಳು ಕೇಳಿಬಂದಿದ್ದವು.
ಆದ್ರೆ ಕೊನೆಗೆ ಬಿಸಿಸಿಐ ಬಿಗ್ ಬಾಸ್ ಗಳು ರೋಹಿತ್ ಶರ್ಮಾಗೆ ಮಣೆ ಹಾಕಿದ್ದಾರೆ. ಇಂದಿನಿಂದ ರೋಹಿತ್ ಶರ್ಮಾ ಟೀಂ ಇಂಡಿಯಾದ ಪೂರ್ಣಪ್ರಮಾಣದ ನಾಯಕರಾಗಿರಲಿದ್ದಾರೆ.









