Cheteshwar pujara| `ಜ್ಯೂನಿಯರ್ ರಾಹುಲ್’ ಕಥೆ ಮುಗೀತು..
ಟೀಂ ಇಂಡಿಯಾದ ಅಭಿನವ ರಾಹುಲ್ ದ್ರಾವಿಡ್ ಅಂತಾನೇ ಖ್ಯಾತಿ ಪಡೆದಿದ್ದ ಬ್ಯಾಟರ್ ಚೇತೇಶ್ವರ್ ಪೂಜಾರ ತಮ್ಮ ಕಳಪೆ ಪಾರ್ಮ್ ಮುಂದುವರೆಸಿದ್ದಾರೆ. cheteshwar-pujara-bags-four-ball-duck
ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸುತ್ತಿರುವ ಪೂಜಾರಾ, ಮುಂಬೈ ವಿರುದ್ಧದ ಪಂದ್ಯದಲ್ಲಿ ಡಕೌಟ್ ಆಗಿದ್ದಾರೆ.
ಮೊದಲ ಇನಿಂಗ್ಸ್ ನಲ್ಲಿ ನಾಲ್ಕು ಎಸೆತಗಳನ್ನು ಎದುರಿಸಿದ ಪೂಜಾರ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು.
ಮುಂಬೈ ಬೌಲರ್ ಮೋಹಿತ್ ಅವಸ್ಥಿ, ಪೂಜಾರ ಅವರನ್ನು ಎಲ್ ಬಿ ರೂಪದಲ್ಲಿ ಡಕೌಟ್ ಮಾಡಿದರು.
ಇದರೊಂದಿಗೆ ಚೇತೇಶ್ವರ್ ಪೂಜಾರ ಅವರ ಕಳಪೆ ಪಾರ್ಮ್ ರಣಜಿಯಲ್ಲೂ ಮುಂದುವರೆದಿದೆ.
ಇನ್ನು ಇಂದು ಬಿಸಿಸಿಐ ಸ್ವದೇಶದಲ್ಲಿ ನಡೆಯುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಪ್ರಕಟಿಸಿದ್ದು, ಚೇತೇಶ್ವರ್ ಪೂಜಾರ ಅವರನ್ನ ಡ್ರಾಪ್ ಮಾಡಿದೆ.
ಅಂದಹಾಗೆ 2018-19ರ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಪೂಜಾರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು.
ಈ ಸರಣಿಯಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದ ಪೂಜಾರ 521 ರನ್ ಗಳಿಸಿದ್ದರು. ಆದರೆ ಆ ಬಳಿಕ ಪೂಜಾರ ಫಾರ್ಮ್ ಕಳೆದುಕೊಂಡ್ರು.
2019 ರಿಂದ ಇಲ್ಲಿಯವರೆಗೆ 27 ಟೆಸ್ಟ್ ಪಂದ್ಯಗಳನ್ನು ಆಡಿರುವ ಪೂಜಾರ ಕೇವಲ 1287 ರನ್ ಗಳಿಸಿದ್ದಾರೆ.
ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 91 ರನ್ ಗಳಿಸಿದ್ದು ಪೂಜಾರ ಅವರ ಗರಿಷ್ಠ ಸ್ಕೋರ್.









