Siddaramaiah | ಅಸೆಂಬ್ಲಿ ಮುಗಿಯುವ ತನಕ ಅಹೋರಾತ್ರಿ ಧರಣಿ
ಬೆಂಗಳೂರು : ಅಸೆಂಬ್ಲಿ ಮುಗಿಯುವ ತನಕ ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿಧಾನಸೌಧ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಅಸೆಂಬ್ಲಿ ಮುಂದೂಡಿದ್ರೆ ನಾವು ಕಾಲ್ ಆಫ್ ಮಾಡಿ ಜನರ ಬಳಿ ಹೋಗ್ತೀವಿ. ಇದು 130 ಕೋಟಿ ಜನರ ಭಾವನೆಗಳ ವಿಚಾರ. ಇದು ದೇಶದ ಸ್ವಾಭಿಮಾನದ ವಿಚಾರ. ಇಂತ ಅವಮಾನ ಮಾಡಿದವರು ಸರ್ಕಾರಲ್ಲಿ ಇರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಸಂವಿಧಾನಕ್ಕೆ ಗೌರವ ಕೊಡದೇ ಇವ್ರು ಮಂತ್ರಿಯಾಗಿ ಹೇಗೆ ಇರ್ತಾರೆ. ರಾಷ್ಟ್ರಧ್ವಜಕ್ಕೆ ಡಿ.ಕೆ.ಶಿವಕುಮಾರ್ ಅಪಮಾನ ಮಾಡಿಲ್ಲ. ಶಿವಮೊಗ್ಗದ ವಿಚಾರವನ್ನ ಡಿಕೆಶಿ ಖಂಡನೆ ಮಾಡಿದ್ರು. ರಾಷ್ಟ್ರಧ್ವಜ ಹಾರುವ ಜಾಗದಲ್ಲಿ ಕೇಸರಿ ಧ್ವಜ ಹಾರಿಸಿದ್ರಲ್ಲ ಅದಕ್ಕೆ ಕ್ರಮ ಏನ್ ತಗೊಂಡ್ರು. ಈಶ್ವರಪ್ಪ ಅವರ ಕೈನಲ್ಲಿ RSS ಅವ್ರೇ ಮಾಡಿಸಿರೋದು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ RSS ಅವ್ರಿಗೆ ತ್ರಿವರ್ಣ ಧ್ವಜ ಅಂದ್ರೆ ಗೌರವ ಇಲ್ಲ, ಅವರಿಗೆ ಕೇಸರಿ ಧ್ವಜದ ಮೇಲೆ ಗೌರವ. ಇದು ಸಂಪೂರ್ಣ ಆರ್ ಎಸ್ ಎಸ್ ಕುತಂತ್ರ. ಸೋಮವಾರದ ದಿನ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲಿ ಹೋರಾಟ ಮಾಡ್ತಾರೆ. ಈ ವಿಚಾರ ಚರ್ಚೆಗೆ ಕೊಟ್ಟು ಈಶ್ವರಪ್ಪ ಅವರ ರಾಜೀನಾಮೆ ಪಡೆದಿದ್ರೆ, ಮುಂದೆ ಹಲವು ವಿಚಾರಗಳನ್ನ ಮಾತನಾಡಬಹುದಿತ್ತು. ಇದನ್ನ ಬಿಟ್ಟು ಸರ್ಕಾರದ ಉತ್ತರ ಕೇಳ್ಕೊಂಡು ಕೂರೋಕಾಗತ್ತಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.









