ಏಷ್ಯಾದ ಅತಿದೊಡ್ಡ ಜೈವಿಕ – CNG ಸ್ಥಾವರ ಉದ್ಘಾಟಿಸಿದ ಮೋದಿ..
ಪ್ರಧಾನಿ ನರೇಂದ್ರಮೋದಿ ಇಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಸ್ಥಾಪಿಸಿರುವ ಏಷ್ಯಾದ ಅತಿದೊಡ್ಡ ಜೈವಿಕ – CNG ಸ್ಥಾವರವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಸಂಪೂರ್ಣ ಹಸಿ ತ್ಯಾಜ್ಯದಿಂದಲೇ ಕಾರ್ಯನಿರ್ವಹಿಸಲಿರುವ ಸ್ಥಾವರವನ್ನ ಸರ್ಕಾರಿ – ಖಾಸಗಿ ಪಾಲುದಾರಿಕೆಯೊಂದಿಗೆ ನಿರ್ಮಿಸಲಾಗಿದೆ. ಇದರಿಂದ ಇಂದೋರ್ ನಗರ ಪಾಲಿಕೆ ವಾರ್ಷಿಕ ಎರಡೂವರೆ ಕೋಟಿ ರೂಪಾಯಿ ಆದಾಯ ಗಳಿಸಲಿದೆ. ಸುಮಾರು 150 ಕೋಟಿ ರೂಪಾಯಿ ವೆಚ್ಚದಲ್ಲಿ ನಗರಪಾಲಿಕೆ ಈ ಸ್ಥಾವರವನ್ನು ನಿರ್ಮಿಸಿದೆ. ಸ್ಥಾವರದಿಂದ ಉತ್ಪಾದನೆಯಾಗುವ ಇಂಧನದಿಂದ ಸುಮಾರು 150 ವಾಹನಗಳು ಸಂಚರಿಸಬಹುದಾಗಿದೆ. PM Modi To Virtually Inaugurate Asia’s Biggest Bio-CNG Plant In Madhya Pradesh
ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಪರೆನ್ಸ್ ನಲ್ಲಿ ಮಾತನಾಡಿ. ನಗರಗಳನ್ನು ಸ್ವಚ್ಛ ಮತ್ತು ಮಾಲಿನ್ಯ ಮುಕ್ತಗೊಳಿಸುವಲ್ಲಿ ಜೈವಿಕ ಸ್ಥಾವರಗಳು ಸಹಕಾರಿಯಾಗಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇಂತಹ ಸ್ಥಾವರಗಳನ್ನು 75 ದೊಡ್ಡ ನಗರ ಪಾಲಿಕೆಗಳಲ್ಲಿ ಸ್ಥಾಪಿಸುವ ಗುರಿ ಹೊಂದಲಾಗಿದೆ. ಲಕ್ಷಾಂತರ ಟನ್ ತ್ಯಾಜ್ಯದಿಂದ ವಾಯು ಮತ್ತು ಜಲ ಮಾಲಿನ್ಯ ಉಂಟಾಗುತ್ತಿದ್ದು, ಈ ಸಮಸ್ಯೆ ನಿವಾರಣೆಯತ್ತ ಸ್ವಚ್ಛ ಭಾರತ್ ಮಿಷನ್ ನ 2ನೇ ಹಂತ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿರು.
ಸ್ವಚ್ಛತೆಗೆ ಇಂದೋರ್ ನಗರ ಖ್ಯಾತಿ ಪಡೆದಿದ್ದು, ನಾಗರಿಕ ಕರ್ತವ್ಯ ಪ್ರಜ್ಞೆ ಮತ್ತು ರಾಜ್ಯ ಸರ್ಕಾರದ ಶ್ರಮದಿಂದ ಇಂದೋರ್ ಸ್ವಚ್ಛತೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಶ್ಲಾಘಿಸಿದರು..








