IPL | RCBಗೆ ಮತ್ತೆ ಕೊಹ್ಲಿ `ಕಿಂಗ್’
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು..? ಇದು ವಿಶ್ವದ ದುಬಾರಿ ಕ್ರಿಕೆಟ್ ಟೂರ್ನಿ ಐಪಿಎಲ್ ನ ಮಿಲಿಯಲ್ ಡಾಲರ್ಸ್ ಪ್ರಶ್ನೆ..!!! ipl 2022-rcb virat kohli saaksha tv
ಹೌದು…!! ಕಳೆದ ಆವೃತ್ತಿಯ ವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕ್ಯಾಪ್ಟನ್ ಹುಡುಕಾಟದ ಪ್ರಶ್ನೆಯೇ ಬಂದಿರಲಿಲ್ಲ. ಯಾಕಂದರೇ ರಾಹುಲ್ ದ್ರಾವಿಡ್ ಯಿಂದ ಹಿಡಿದು ವಿರಾಟ್ ಕೊಹ್ಲಿವರೆಗೂ ರೆಡಿಮೇಡ್ ಆಗಿ ತಂಡದಲ್ಲಿ ನಾಯಕರಿದ್ದರು.
ಅದರಲ್ಲೂ ವಿರಾಟ್ ಕೊಹ್ಲಿ ಮುನ್ನಲೆಗೆ ಬಂದ ಬಳಿಕ ವಿರಾಟ್ ಖಾಯಂ ನಾಯಕರಾಗಿದ್ರು. ಆರ್ ಸಿಬಿ ಅಂದ್ರೆ ವಿರಾಟ್ ಕೊಹ್ಲಿ, ವಿರಾಟ್ ಕೊಹ್ಲಿ ಅಂದ್ರೆ ಆರ್ ಸಿಬಿ ಎನ್ನುವಂತೆ ಆಗಿತ್ತು.
ವಿರಾಟ್ ಕೊಹ್ಲಿ ಬೆಳೆದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರ್ಯಾಂಡ್ ವಾಲ್ಯೂ ಕೂಡ ಬೆಳೆಯುತ್ತಾ ಹೋಯ್ತು.. ವಿರಾಟ್ ಕೊಹ್ಲಿ ಕ್ರೇಜ್ ಹೆಚ್ಚಾಗುತ್ತಿದ್ದಂತೆ ಬೆಂಗಳೂರು ತಂಡದ ಕ್ರೇಜ್ ಕೂಡ ಹೆಚ್ಚಾಯ್ತು.
ವಿರಾಟ್ ಅಭಿಮಾನಿಗಳು ಹೆಚ್ಚಾದಂತೆ ಆರ್ ಸಿಬಿಯ ಅಭಿಮಾನಿಗಳೂ ಹೆಚ್ಚಾದ್ರು. ದೇಶ ವಿದೇಶದಲ್ಲಿ ವಿರಾಟ್ – ಆರ್ ಸಿಬಿ ಕ್ರೇಜ್ ಹುಟ್ಟುಕೊಂಡಿತು.
ಹೀಗಾಗಿಯೇ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿದ್ದರು. ಆದ್ರೆ ವಿರಾಟ್ ಕಳೆದ ವರ್ಷ ಆರ್ ಸಿಬಿಯ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ರು.
ಇದನ್ನ ಇಂದಿಗೂ ಕೋಟ್ಯಂತರ ಅಭಿಮಾನಿಗಳು ಅರಗಿಸಿಕೊಳ್ಳಲು ಸಿದ್ಧರಿಲ್ಲ. ವಿರಾಟ್ ಆರ್ ಸಿಬಿಯ ನಾಯಕನಲ್ಲ ಅಂತ ಒಪ್ಪಿಕೊಂಡ್ರೂ ಮತ್ತೆ ಅವರೇ ನಾಯಕರಾಗಲಿ ಅನ್ನೋದು ಅಭಿಮಾನಿಗಳ ಆಶಯವಾಗಿದೆ.
ಈ ಮಧ್ಯೆ ಆರ್ ಸಿಬಿ ಫ್ರಾಂಚೈಸಿ ಕೂಡ ತಂಡಕ್ಕೆ ಇನ್ನೂ ನಾಯಕನನ್ನ ಘೋಷಣೆ ಮಾಡಿಲ್ಲ. ತಂಡದಲ್ಲಿ ಮ್ಯಾಕ್ಸಿ, ಡುಪ್ಲಸಿಸ್, ದಿನೇಶ್ ಕಾರ್ತಿಕ್ ಇದ್ದರೂ ಈವರೆಗೂ ಇವರೇ ನಮ್ಮ ನಾಯಕ ಅಂತಾ ಫ್ರಾಂಚೈಸಿ ಹೇಳಿಲ್ಲ. ಬದಲಾಗಿ ವಿರಾಟ್ ಕೊಹ್ಲಿ ಅವರನ್ನ ಮತ್ತೆ ನಾಯಕರನ್ನಾಗಿ ಮಾಡುವ ಬಗ್ಗೆ ಚಿಂತನೆಯಲ್ಲಿದೆ.
ಯಾಕಂದರೇ ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ನಾಯಕರಾಗಿದ್ದ ಕಾರಣ ಹೆಚ್ಚಿನ ಹೊರೆಯನ್ನ ಕಡಿಮೆ ಮಾಡಿಕೊಳ್ಳಲು ಆರ್ ಸಿಬಿ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ರು.
ಆದ್ರೆ ಈಗ ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ಯಾವುದೇ ಜವಾಬ್ದಾರಿ ವಹಿಸಿಕೊಂಡಿಲ್ಲ. ಸದ್ಯ ವಿರಾಟ್ ಕೊಹ್ಲಿ ಒಬ್ಬ ಬ್ಯಾಟರ್ ಆಗಿ ಮಾತ್ರ ಟೀಂ ಇಂಡಿಯಾದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಸದ್ಯ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಂಡಿದ್ದು, ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗುವ ಸಾದ್ಯತೆಗಳು ಹೆಚ್ಚಿವೆ.
ಆದ್ರೆ ಬೆಂಗಳೂರು ತಂಡಕ್ಕೆ ಯಾರೇ ನಾಯಕರಾದ್ರೂ ವಿರಾಟ್ ಕೊಹ್ಲಿ ಆರ್ ಸಿಬಿಯ ಸಾರ್ವಕಾಲಿಕ ಕಿಂಗ್ ಅನ್ನೋ ಎಲ್ಲರ ವಾದ.









