IPL 2022 | ಸಿಎಂ ಯೋಗಿ – ಲಕ್ನೋ ತಂಡ ಮಾಲೀಕ ಭೇಟಿ ipl-2022-sanjiv-goenka-gautam-gambhir-meets-cm-yogi saaksha tv
ಲಕ್ನೋ ಸೂಪರ್ ಜೈಂಟ್ಸ್ (LSG) ಫ್ರಾಂಚೈಸಿ ತನ್ನ ಹೆಡ್ ಕ್ವಾರ್ಟಸ್ ಗೆ ಸಂಬಂಧಿಸಿದಂತೆ ಪ್ರಮುಖ ವ್ಯಕ್ತಿಯನ್ನ ಭೇಟಿಯಾಗಿದೆ.
ಶನಿವಾರ ಎಲ್ ಎಸ್ ಜಿ ಮಾಲೀಕ ಸಂಜೀವ್ ಗೋಯೆಂಕಾ, ತಂಡದ ಮಾರ್ಗದರ್ಶಕ ಮತ್ತು ದೆಹಲಿ ಸಂಸದ ಗೌತಮ್ ಗಂಭೀರ್ ಅವರೊಂದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆ.
ಈ ಭೇಟಿ ವೇಳೆ ಸಂಜೀವ್ ಗೋಯೆಂಕಾ ಹಾಗೂ ಗಂಭೀರ್ ಯೋಗಿ ಜತೆ ಕೆಲಕಾಲ ಮಾತುಕತೆ ನಡಸಿದ್ದಾರೆ.
ಅಲ್ಲದೆ ಫ್ರಾಂಚೈಸಿಯ ಮೊದಲ ಬ್ಯಾಟ್ ಅನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬ್ಯುಸಿಯಾಗಿರುವ ಯೋಗಿ, ಸಂಜೀವ್ ಗೋಯೆಂಕಾ ಮತ್ತು ಗಂಭೀರ್ ಅವರನ್ನು ಭೇಟಿಯಾಗಿರುವುದು ಮಹತ್ವ ಪಡೆದುಕೊಂಡಿದೆ.
ಬ್ಯಾಟ್ ಹಸ್ತಾಂತರಿಸುತ್ತಿರುವ ಫೋಟೋವನ್ನು ಎಲ್ ಎಸ್ ಜಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಇದು ಹೀಗಿದ್ದರೇ ರಿಟೆನ್ಷನ್ ಭಾಗವಾಗಿ ಕೆ.ಎಲ್ ರಾಹುಲ್, ಮಾರ್ಕಸ್ ಸ್ಟೊಯಿನಿಸ್ ಮತ್ತು ರವಿ ಬಿಷ್ಣೋಯ್ ಅವರನ್ನು ರಿಟೈನ್ಡ್ ಮಾಡಿಕೊಂಡ ಲಕ್ನೋ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಇನ್ನೂ 18 ಆಟಗಾರರನ್ನು 69 ಕೋಟಿ ವೆಚ್ಚಿಸಿ ಖರೀದಿಸಿದೆ.









