ಕ್ಯಾಷ್ ಬ್ಯಾಕ್ ಆಸೆಯಿಂದ ಹಣ ಕಳೆದುಕೊಂಡ ವಿದ್ಯಾರ್ಥಿ Saaksha Tv
ರಾಯಚೂರು: ಕ್ಯಾಷ್ ಬ್ಯಾಕ್ ಆಸೆಯಿಂದ ವಿದ್ಯಾರ್ಥಿ 3 ಲಕ್ಷ ಹಣ ಕಳೆದುಕೊಂಡ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ನಡೆದಿದೆ.
ಶ್ರೀಧರ್ ಪಾಟೀಲ್ ವಂಚನೆ ಗೊಳಗಾದ ವಿದ್ಯಾರ್ಥಿ. ಇವರು ಪಾರ್ಟ್ ಟೈಂ ಕೆಲಸದ ಲಿಂಕ್ ಓಪನ್ ಮಾಡಿದ್ದರು. ಆಗ ಕೆಲಸಕ್ಕೂ ಮುನ್ನ ಪ್ರಾಡಕ್ಟ್ ಖರೀದಿಗೆ ಆಫರ್ ಬಂದಿದೆ. ಹೀಗಾಗಿ ಶ್ರೀಧರ್ ಮೊದಲಿಗೆ 200 ಕೊಟ್ಟು ವಸ್ತುವೊಂದನ್ನು ಖರೀದಿ ಮಾಡಿದ್ದರು. ಆಗ ಅದಕ್ಕೆ 300 ರೂಪಾಯಿ ಕ್ಯಾಷ್ ಬ್ಯಾಕ್ ಬಂದಿದೆ. ಇದಾದ ಬಳಿಕ ಮತ್ತೊಮ್ಮೆ 69 ಸಾವಿರಕ್ಕೆ 2 ವಸ್ತುಗಳನ್ನು ಖರೀದಿಸಿದ್ದಾರೆ. ಆಗಲೂ ಕ್ಯಾಷ್ ಬ್ಯಾಕ್ ಜೊತೆ ಕಮಿಷನ್ ಕೂಡ ಸಿಕ್ಕಿದೆ.
ಇದರಿಂದ ಖುಷಿಯಾದ ಶ್ರೀಧರ್ ಒಳ್ಳೆ ದುಡ್ಡು ಮಾಡಬಹುದೆಂದು, ಮೋಸವಾಗುವುದಿಲ್ಲ ಎಂಬ ನಂಬಿಕೆಯಲ್ಲಿ ಹೆಚ್ಚಿನ ಹಣದಾಸೆಗೆ ತನ್ನ ನಾಲ್ಕು ಜನ ಸ್ನೇಹಿತರಿಂದ ಸಾಲ ಪಡೆದು ಸುಮಾರು 3,78,600 ರೂ. ಹಾಕಿ ಪ್ರಾಡಕ್ಟ್ ಖರೀದಿಸಿದ್ದಾರೆ. ಆಗ ಹಣ ನೀಡದೇ ಹೆಚ್ಚಿನ ಪ್ರಾಡಕ್ಟ್ ಖರೀದಿಸಲು ತಾಕೀತು ಮಾಡಲಾಗಿದೆ. ಕ್ಯಾಷ್ ಬ್ಯಾಕ್ ಆಸೆಯಿಂದ 3 ಲಕ್ಷ ಹಣ ಕಳೆದುಕೊಂಡು ಶ್ರೀಧರ್ ಕಂಗಾಲಾಗಿದ್ದಾರೆ. ಸದ್ಯ ರಾಯಚೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








