Rahul Dravid | ಸಹಾ ಆರೋಪಕ್ಕೆ ದ್ರಾವಿಡ್ ಹೇಳಿದ್ದೇನು..? rahul-dravid-reaction-wriddhiman-saha-comments
ರಾಹುಲ್ ದ್ರಾವಿಡ್ ನನಗೆ ನಿವೃತ್ತಿ ಬಗ್ಗೆ ಯೋಚಿಸು ಎಂದಿದ್ದಾರೆ ಎಂಬ ವಿಕೇಟ್ ಕೀಪರ್ ವೃದ್ಧಿಮಾನ್ ಸಹಾ ಹೇಳಿಕೆಗೆ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ. ವೃದ್ಧಿಮಾನ್ ಸಹಾ ಮಾತುಗಳು ನನಗೆ ನೋವುಂಟು ಮಾಡಿಲ್ಲ. ಸಹಾ ನನಗೆ ಇನ್ನೂ ಗೌರವವಿದೆ ಅಂತಾ ಟೀಂ ಇಂಡಿಯಾದ ಹೆಡ್ ಕೋಚ್ ಹೇಳಿದ್ದಾರೆ.
ಶ್ರೀಲಂಕಾ ಸರಣಿಯಲ್ಲಿ ಅವಕಾಶ ತಪ್ಪಿದ್ದಕ್ಕಾಗಿ ವೃದ್ಧಿಮಾನ್ ಸಹಾ, ಮಾಧ್ಯಮಗಳ ಮುಂದೆ ಅಸಮಾಧಾನ ಹೊರಹಾಕಿದರು. ರಾಹುಲ್ ದ್ರಾವಿಡ್ ನನಗೆ ನಿವೃತ್ತಿ ಬಗ್ಗೆ ಯೋಚಿಸು ಅಂತಾ ಸಲಹೆ ನೀಡಿದ್ದಾರೆ ಎಂದು ಸಹಾ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್ ದ್ರಾವಿಡ್, “ಅವರು ಭಾರತೀಯ ಕ್ರಿಕೆಟ್‌ನ ಯಶಸ್ಸಿನ ಭಾಗವಾಗಿದ್ದಾರೆ. ಅವರ ಬಗ್ಗೆ ನನಗೆ ಗೌರವವಿದೆ. ಈ ಕ್ರಮದಲ್ಲಿ ನಾನು ಅವರೊಂದಿಗೆ ಮಾತನಾಡಿದ್ದೇನೆ. ಆದರೆ, ಈ ವಿಚಾರದಲ್ಲಿ ಅವರಿಗೆ ಸ್ಪಷ್ಟತೆ ಬೇಕಿದೆ.
ವಾಸ್ತವವಾಗಿ ನಾನು ಎಲ್ಲ ಆಟಗಾರರೊಂದಿಗೆ ಯಾವಾಗಲೂ ಮಾತನಾಡಿದಂತೆ ಅವರೊಂದಿಗೆ ಮಾತನಾಡಿದ್ದೇನೆ. ಈ ಮಾತುಗಳನ್ನು ಮಾಧ್ಯಮಗಳ ಮೂಲಕ ಕೇಳುತ್ತೇನೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಆದರೂ, ನಮ್ಮ ಸಲಹೆಗಳು, ಸಂದೇಶಗಳು ಆಟಗಾರರಿಗೆ ಕೆಲವು ಬಾರಿ ಇಷ್ಟ ಆಗುವುದಿಲ್ಲ. ಆದುದರಿಂದಲೇ ಅವರ ಮಾತಿನಿಂದ ಹೆಚ್ಚು ಮನನೊಂದಿಲ್ಲ. ನಮ್ಮ ಅಭಿಪ್ರಾಯಗಳನ್ನು ಒಪ್ಪುವುದಿಲ್ಲ ಎಂದು ಅವರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.









