UP Election – ಶೋಲೆ ಚಿತ್ರದ ಡೈಲಾಗ್ ಹೇಳಿದ ಕೇಜ್ರಿವಾಲ್…
ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನ ಪೂರ್ಣಗೊಂಡಿದೆ. ಇದೀಗ ಎಲ್ಲ ರಾಜಕೀಯ ಪಕ್ಷಗಳ ಕಣ್ಣು ನಾಲ್ಕನೇ ಹಂತದತ್ತ ನೆಟ್ಟಿದೆ.
ಒಂದು ವೇಳೆ ಯುಪಿಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದೇ ಇರುವ ಪರಿಸ್ಥಿತಿ ಎದುರಾದರೆ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಎಪಿ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲಿದೆ ಎಂದು ದೆಹಲಿ ಸಿಎಂ ಮತ್ತು ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
“ಕೇಜ್ರಿವಾಲ್ ಭ್ರಷ್ಟರನ್ನು ಹೆದರಿಸುವ ಭಯೋತ್ಪಾದಕ… ಶೋಲೆ ಚಿತ್ರದ ಒಂದು ಡೈಲಾಗ್ ಇದೆ…” ಜಬ್ ಬಚ್ಚಾ ಭ್ರಷ್ಟಾಚಾರ್ ಕರ್ತಾ ಹೈ ತೋ ಮಾ ಕೆಹತೀ ಹೈ ಸೋಜಾ ಬೇಟಾ ವರ್ಣ ಕೇಜ್ರಿವಾಲ್ ಆಜಯೇಗಾ…” ಎಂದು ಲಕ್ನೋದಲ್ಲಿ ದೆಹಲಿ ಸಿಎಂ ಮತ್ತು ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಡೈಲಾಗ್ ಹೊಡೆದಿದ್ದಾರೆ.
“ಇಂದು ಯುಪಿಯಲ್ಲಿ ‘ಬಾಹುಬಲಿ’ ಇಲ್ಲ, ಈಗ ‘ಬಜರಂಗಬಲಿ’ ಇದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ … ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತವೆ, ಸಶಸ್ತ್ರ ಪಡೆಗಳನ್ನು ಅವಮಾನಿಸುತ್ತವೆ, ಭಯೋತ್ಪಾದಕರನ್ನು ಬಿಡುತ್ತವೆ. ಆದರೆ ಬಿಜೆಪಿ ಬಡವರು, ಯುವಕರು, ಮಹಿಳೆಯರಿಗಾಗಿ ಕೆಲಸ ಮಾಡುತ್ತದೆ ಎಂದು “ಉತ್ತರ ಪ್ರದೇಶದ ಸೀತಾಪುರದಲ್ಲಿ ಬಿಜೆಪಿ ನಾಯಕ ಮತ್ತು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.








