ಆಟಗಾರರು ಮೀಡಿಯಾ ಜೊತೆ ಮಾತನಾಡಬಾರದು.. ಬಿಸಿಸಿಐ ಮಾರ್ಗಸೂಚಿ
ಟೀಂ ಇಂಡಿಯಾದ ಅನುಭವಿ ವಿಕೆಟ್‌ಕೀಪರ್ ವೃದ್ದಿಮಾನ್ ಸಹಾ – ಪತ್ರಕರ್ತ ನಡುವಿನ ವಿವಾದದಿಂದ ಬಿಸಿಸಿಐ ಎಚ್ಚೆತ್ತುಕೊಂಡಿದೆ.
ಟೀಂ ಇಂಡಿಯಾ ಕಾಂಟ್ರಾಕ್ಟ್ ನಲ್ಲಿರುವ ಆಟಗಾರರು ಮೀಡಿಯಾ ಜೊತೆ ನೇರವಾಗಿ ಮಾತನಾಡುವ ವಿಚಾರವಾಗಿ ಹೊಸ ಮಾರ್ಗಸೂಚಿಯನ್ನ ಸಿದ್ಧಪಡಿಸಲು ಬಿಸಿಸಿಐ ಚಿಂತನೆ ನಡೆಸಿದೆ.
ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿದೆ.

ಬಿಸಿಸಿಐ ಪ್ರಸ್ತಾಪಿಸುತ್ತಿರುವ ಹೊಸ ಮಾಧ್ಯಮ ಮಾರ್ಗಸೂಚಿಗಳು:
ಬಿಸಿಸಿಐ ಗುತ್ತಿಗೆ ಆಟಗಾರರೊಂದಿಗೆ ಮಾಧ್ಯಮಗಳು ನೇರವಾಗಿ ಮಾತನಾಡಬಾರದು.
ಆಟಗಾರರು ಮತ್ತು ಮಾಧ್ಯಮಗಳ ನಡುವೆ ಮಾಹಿತಿ ವರ್ಗಾವಣೆ ಬಿಸಿಸಿಐ ಮೀಡಿಯಾ ಮ್ಯಾನೇಜರ್ ಮೂಲಕ ನಡೆಯಬೇಕು.
ಬಿಸಿಸಿಐಗೆ ಮಾಹಿತಿ ನೀಡದೆ ಅನುಚಿತ ಟೀಕೆ ಮಾಡುವ ಆಟಗಾರನಿಗೆ ನಿಷೇಧ ಅಥವಾ ದಂಡ ವಿಧಿಸುವ ಸಾಧ್ಯತೆ ಇದೆ.
ಬಿಸಿಸಿಐ ಮಾಧ್ಯಮ ವ್ಯವಸ್ಥಾಪಕರ ಅನುಮತಿಯಿಲ್ಲದೆ ಆಟಗಾರರ ಸಂದರ್ಶನ ಮತ್ತು ಬೈಟ್‌ಗಳನ್ನು ತೆಗೆದುಕೊಳ್ಳುವ ಪತ್ರಕರ್ತರನ್ನು ಒಂದು ವರ್ಷದವರೆಗೆ ಕಪ್ಪು ಪಟ್ಟಿಗೆ ಸೇರಿಸುವ ಅವಕಾಶ ಇದೆ.
ಈ ನಿಯಮಗಳು ಅಂಡರ್-19 ಕ್ರಿಕೆಟಿಗರಿಗೂ ಅನ್ವಯಿಸುತ್ತವೆ. bcci-mulls-new-media-guidelines saaksha tv








