ತಗ್ಗದ ವಿರಾಟ್ ಕ್ರೇಜ್.. ಹರಾಜು ಪ್ರಾಣಿಗಳ ಸಂತೆ.. ಓದಿ ಕ್ರೀಡಾ ಜಗತ್ತಿನ ಪ್ರಮುಖ ಸುದ್ದಿ
01. ಟೀಂ ಇಂಡಿಯಾ ಮೆಷಿನ್ ಗನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ಎಲ್ಲಾ ಫಾರ್ಮ್ಯಾಟ್‌ಗಳ ನಾಯಕತ್ವದಿಂದ ಕೆಳಗಿಳಿದಿದ್ದರೂ ಕೊಹ್ಲಿ ಕ್ರೇಜ್ ಕಡಿಮೆಯಾಗಿಲ್ಲ. 2022 ರ ಜನವರಿ ತಿಂಗಳಿನಲ್ಲಿ ಭಾರತದ ಅತ್ಯಂತ ಜನಪ್ರಿಯ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.
King Kohli | ಕ್ಯಾಪ್ಟನ್ಸಿಯಿಂದ ಕೆಳಗಿಳಿದ್ರೂ ತಗ್ಗದ ಕೊಹ್ಲಿ ಕ್ರೇಜ್…!!
02. ಐಪಿಎಲ್ ಮೆಗಾ ಹರಾಜಿನ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ರಾಬಿನ್ ಉತ್ತಪ್ಪ ಐಪಿಎಲ್ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಐಪಿಎಲ್ ಹರಾಜು ಎಳ್ಳಷ್ಟೂ ಚೆನ್ನಾಗಿಲ್ಲ, ಹರಾಜನ್ನ ನೋಡುತ್ತಿದ್ದರೇ ಸಂತೆಯಲ್ಲಿ ಜಾನುವಾರುಗಳ ಹರಾಜು ನೋಡುವಂತೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Robin-uthappa | ಐಪಿಎಲ್ ಹರಾಜು ಪ್ರಾಣಿಗಳ ಸಂತೆಯಂತಿದೆ
03. ಈ ವರ್ಷದ ಕ್ರಿಕೆಟ್ ಹಬ್ಬ, ಐಪಿಎಲ್ 2022, ಬಿಸಿಸಿಐ ಪೂರ್ವನಿರ್ಧರಿತ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ಪ್ರಾರಂಭವಾಗುವ ಸಾಧ್ಯತೆಯಿದೆ. ಬಿಸಿಸಿಐ ಆರಂಭದಲ್ಲಿ ಈ ವರ್ಷದ ಕ್ಯಾಶ್ ರಿಚ್ ಲೀಗ್ ಅನ್ನು ಮಾರ್ಚ್ 27 ರಂದು ಪ್ರಾರಂಭಿಸಲು ಯೋಜಿಸಿತ್ತು. ಆದ್ರೆ ಲೀಗ್‌ನ ಅಧಿಕೃತ ಬ್ರಾಡ್‌ಕಾಸ್ಟರ್ ಸ್ಟಾರ್ ಇಂಡಿಯಾದ ಕೋರಿಕೆಯ ಮೇರೆಗೆ ಒಂದು ದಿನ (ಮಾರ್ಚ್ 26) ಲೀಗ್ ಅನ್ನು ಪ್ರಾರಂಭಿಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.
`ಸೂರ್ಯ’ ನಮಸ್ಕಾರಕ್ಕೆ ನೆಟ್ಟಿಗರು ಪಿಧಾ — Scheduled
04. ವಿಂಡೀಸ್ ವಿರುದ್ಧದ ಟಿ 20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಮೇಲೆ ಟೀಂ ಇಂಡಿಯಾದ ಮಾಜಿ ಆಟಗಾರರ ವಾಸೀಂ ಜಾಫರ್ ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. ಹಾರ್ದಿಕ್ ಪಾಂಡ್ಯಗೆ ಹೋಲಿಕೆ ಮಾಡಿದ್ರೆ ವೆಂಕಟೇಶ್ ಅಯ್ಯರ್ ಉತ್ತಮ ಟಚ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಮುಂದಿನ ಟಿ 20 ವಿಶ್ವಕಪ್ ತಂಡದಲ್ಲಿ ಖಂಡಿತವಾಗಿಯೂ ಸ್ಥಾನಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
T20 WC 2022 | ಹಾರ್ದಿಕ್ ಪಾಂಡ್ಯ ಕಥೆ ಮುಗೀತು.. ಅಯ್ಯರ್ ಬೆಸ್ಟ್
05. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಸರಣಿಯನ್ನು ವೈಟ್ ವಾಶ್ ಮಾಡಿದ್ದು ಈಗ ಇತಿಹಾಸ. ಆದ್ರೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಮಾಡಿದ ನಮಸ್ಕಾರ ಎಲ್ಲೆಡೆ ವೈರಲ್ ಆಗುತ್ತಿದೆ.
`ಸೂರ್ಯ’ ನಮಸ್ಕಾರಕ್ಕೆ ನೆಟ್ಟಿಗರು ಪಿಧಾ — Scheduled
Virat Craze rohit sharma IPL 2022








