Siddaramaiah | ಸಿದ್ದರಾಮಯ್ಯ ಹೇಳುವುದೆಲ್ಲವೂ ಸುಳ್ಳು, ಸುಳ್ಳು, ಸುಳ್ಳು
ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳುವುದೆಲ್ಲವೂ ಸುಳ್ಳು, ಸುಳ್ಳು, ಸುಳ್ಳು ಎಂದು ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯನವರೇ ಸುಳ್ಳೇ ನಿಮ್ಮ ಮನೆ ದೇವರು ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದೀರಿ. ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಯನ್ನು ಲಕ್ಷ್ಯದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಜಾತಿ ಗಣತಿ ನಡೆಸಿತ್ತು ಎಂದು ಹೊಸ ಸುಳ್ಳನ್ನು ತೇಲಿಬಿಟ್ಟಿದ್ದೀರಿ. ಸಿದ್ದರಾಮಯ್ಯ ಹೇಳುವುದೆಲ್ಲವೂ ಸುಳ್ಳು, ಸುಳ್ಳು, ಸುಳ್ಳು ಅಂತಾ ಟೀಕೆ ಮಾಡಿದೆ.
https://twitter.com/BJP4Karnataka/status/1496376440467517442?s=20&t=q1o6kdb_G8Fcg-GVRf3SBA
ಅಲ್ಲದೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮಹಾಮೈತ್ರಿ ಹಿಂದುಳಿದ ವರ್ಗದ ಮೀಸಲು ವಿಚಾರ ಇತ್ಯರ್ಥಗೊಳಿಸಲು ವಿಫಲವಾಗಿದೆ.ಆದರೆ ಬುರುಡೆರಾಮಯ್ಯ ಇಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಕುಟುಕಿದೆ. ಜೊತೆಗೆ ಜಾತಿ ಗಣತಿ ಸಿದ್ದರಾಮಯ್ಯರ ಗುಪ್ತ ರಾಜಕೀಯದ ಭಾಗ.ಇದರಿಂದಲೇ ಮೀಸಲು ವಿವಾದಕ್ಕೆ ಮುಕ್ತಿ ಸಿಗುವುದಾಗಿದ್ದರೆ ಅಧಿಕಾರದಲ್ಲಿದ್ದಾಗ ಕೈ ಕಟ್ಟಿ ಕುಳಿತಿದ್ದೇಕೆ ಎಂದು ಸಿದ್ದರಾಮಯ್ಯರನ್ನ ಬಿಜೆಪಿ ಪ್ರಶ್ನಿಸಿದೆ.
Karnataka BJP blames Siddaramaiah
https://twitter.com/BJP4Karnataka/status/1496378289379676161?s=20&t=q1o6kdb_G8Fcg-GVRf3SBA









