ಭಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್….!!!!
ಶಿವಮೊಗ್ಗ : ಭಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ… ಘಟನೆ ನಡೆಯುವ ಮುಂಚೆ ಹರ್ಷನಿಗೆ ಇಬ್ಬರು ಹುಡುಗಿಯರು ಒಂದೇ ಸಮನೇ ಕಾಲ್ ಮಾಡ್ತಿದ್ದ ವಿಚಾರವನ್ನ ಹರ್ಷನ ಸ್ನೇಹಿತ ಬಿಚ್ಚಿಟ್ಟಿದ್ದಾರೆ..
ಇಬ್ಬರು ಹುಡುಗಿಯರು ಕೊಲೆಯಾಗುವುದಕ್ಕೂ ಮೊದಲೂ ಕರೆ ಮಾಡುತ್ತಿದ್ದರು , ಪದೇಪದೇ ವಿಡಿಯೋ ಕಾಲ್ ಮಾಡಿದ್ದರು ಎನ್ನಲಾಗಿದೆ.. ಅಲ್ಲದೇ ಈ ಹುಡುಗೀರು ನಾನು ನಿಮಗೆ ಫ್ರೆಂಡ್ ಎಂದು ಹೇಳುತ್ತಿದ್ದರು ಎನ್ನಲಾಗಿದೆ…
ಆ ಹುಡುಗೀರ ಬಳಿ ಹರ್ಷ , ನನ್ನಿಂದ ಏನಾಗಬೇಕು ಎಂದು ಕೇಳಿದ್ದನಂತೆ , ಈ ಬಗ್ಗೆ ಸ್ನೇಹಿತರ ಜೊತೆಗೂ ಹೇಳಿಕೊಂಡಿದ್ದನಂತೆ.. ಈ ಹುಡುಗೀರು ಹೀಗೆ ಪದೇ ಪದೇ ವಿಡಿಯೋ ಕಾಲ್ ಮಾಡಿದ ನಂತರ ಅಲ್ಲಿಂದ ಹರ್ಷ ಹೊರಟ್ಟಿದ್ದನಂತೆ,,, ಅದಾದ ಕೆಲವೇ ಕ್ಷಣಗಳಲ್ಲಿ ಹರ್ಷನ ಕೊಲೆಯಾಗಿದೆ.
ಹರ್ಷನ ಮೊಬೈಲ್ ಪತ್ತೆ ಆಗದಿರುವುದು ನಿಗೂಢ ಇನ್ನಷ್ಟು ಅನುಮಾನಗಳನ್ನ ಹೆಚ್ಚಿಸಿದ್ದು , ಈ ಇಬ್ಬರೂ ಹುಡುಗೀರು ಈ ಕೊಲೆ ಸಂಚಿನಲ್ಲಿ ಶಾಮೀಲಾಗಿದ್ದಾರೆಂದು ಹರ್ಷನ ಸ್ನೇಹಿತ ಆರೋಪಿಸಿದ್ದಾನೆ. ಹರ್ಷನ ಮೊಬೈಲ್ ಇಲ್ಲಿಯವರೆಗೂ ಸಿಕ್ಕಿಲ್ಲ..
ಹರ್ಷನ ಮೊಬೈಲ್ ಆರೋಪಿಗಳ ಬಳಿ ಇದೆಯೇ, ಹುಡುಗಿಯರನ್ನು ಆರೋಪಿಗಳು ಕೊಲೆಗೆ ಬಳಸಿಕೊಂಡಿದ್ದಾರಾ, ಸಹಾಯ ಕೇಳುವ ನೆಪದಲ್ಲಿ ಹುಡುಗಿಯರು ಕರೆ ಮಾಡಿದ್ರಾ ಎಂಬ ಅನುಮಾನಗಳಿವೆ.








