Ind Vs SL : ಪ್ರಾಕ್ಟೀಸ್ ಶುರು ಮಾಡಿದ ರಾಕ್ ಸ್ಟಾರ್..
ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ತುಂಬಾ ದಿನಗಳ ಬಳಿಕ ಟಿಂ ಇಂಡಿಯಾಗೆ ರೀ ಎಂಟ್ರಿಕೊಟ್ಟಿದ್ದಾರೆ. ಶ್ರೀಲಂಕಾ ವಿರುದ್ಧ ನಡೆಯಲಿರುವ ಟಿ 20, ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಸಿಸಿಐ ಟಿವಿಯೊಂದಿಗೆ ಮಾತನಾಡಿದ ರವೀಂದ್ರ ಜಡೇಜಾ, ಮರಳಿ ತಂಡಕ್ಕೆ ವಾಪಸ್ ಆಗಿರೋದು ಸಂತಸ ತಂದಿದೆ.
“ಎರಡು ತಿಂಗಳ ನಂತರ ನಾನು ಅಂತಿಮವಾಗಿ ಟೀಂ ಇಂಡಿಯಾ ಪರ ಆಡಲಿದ್ದೇನೆ.
ಟಿ20 ಹಾಗೂ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ಜಡ್ಡು ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಸರಣಿಯ ವೇಳೆ ರವೀಂದ್ರ ಜಡೇಜಾ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಜಡೇಜಾ ದಕ್ಷಿಣ ಆಫ್ರಿಕಾ ಪ್ರವಾಸ ಮಿಸ್ ಮಾಡಿಕೊಂಡಿದ್ದರು.
ಸದ್ಯ ಫುಲ್ ಫಿಟ್ ಆಗಿರುವ ಜಡೇಜಾ, ಶ್ರೀಲಂಕಾ ವಿರುದ್ಧದ ಸರಣಿಗಾಗಿ ಭಾರತ ಸೇರಿಕೊಂಡಿದ್ದಾರೆ.
ಅಲ್ಲದೇ ಈಗಾಗಲೇ ನೆಟ್ಸ್ ಗಳಲ್ಲಿ ಅಭ್ಯಾಸ ಶುರು ಮಾಡಿದ್ದಾರೆ.
ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯು ಫೆಬ್ರವರಿ 24 ರಂದು ಲಕ್ನೋದಲ್ಲಿ ಆರಂಭವಾಗಲಿದೆ.
ind-vs-sl-ravindra-jadeja come back Saaksha tv









