Sachin | ಕೊಹ್ಲಿಯನ್ನ ನೋಡಿದ್ರೆ ನನ್ನನ್ನು ನಾನು ನೋಡಿಕೊಂಡಂತಾಗುತ್ತೆ
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಸಚಿನ್ ಕೆಲ ಆಸಕ್ತಿಕರ ಸಂಗತಿಗಳನ್ನು ಬಹಿರಂಗಗೊಳಿಸಿದ್ದಾರೆ. ವಿರಾಟ್ ಕೊಹ್ಲಿಯನ್ನ ನೋಡಿದರೇ ನನ್ನನ್ನು ನಾನು ನೋಡಿಕೊಂಡಂತೆ ಆಗುತ್ತಿದೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.
2014 ರಲ್ಲಿ, ವಿರಾಟ್ ಕೊಹ್ಲಿ ನನ್ನ ಸಹಾಯವನ್ನ ಕೇಳಿದ್ದ, ಬ್ಯಾಟಿಂಗ್ ನಲ್ಲಿದ್ದ ಸಮಸ್ಯೆಗಳ ಬಗ್ಗೆ ಮಾತನಾಡು ಸ್ವಲ್ಪ ಸಮಯ ತನ್ನೊಂದಿಗೆ ಸಮಯ ಕಳೆಯುವಂತೆ ವಿರಾಟ್ ಕೇಳಿಕೊಂಡಿದ್ದ ಎಂದು ಸಚಿನ್ ತಿಳಿಸಿದ್ದಾರೆ.
ಆ ಸಮಯದಲ್ಲಿ ಕೊಹ್ಲಿ ಫಾರ್ಮ್ ಕಳೆದುಕೊಂಡು ಇಂಗ್ಲೆಂಡ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದರು. ಪ್ರತಿ ಆಟಗಾರ ಕೆರಿಯರ್ ನಲ್ಲಿ ಈ ರೀತಿ ನಡೆಯೋದು ಸಹಜ, ವಿರಾಟ್ ವಿಚಾರದಲ್ಲೂ ಇದೇ ಆಗಿತ್ತು.
ಇದಕ್ಕೆ ಸಂಬಂಧಿಸಿದಂತೆ ವಿರಾಟ್ ನನ್ನ ಬಳಿ ಸಲಹೆ ಕೇಳಿದ್ದ, ಆಗ ನಾನು ನನಗೆ ತಿಳಿದ ಸಲಹೆ, ಸೂಚನೆಗಳನ್ನ ನೀಡಿದ್ದೆ ಎಂದಿದ್ದಾರೆ ಸಚಿನ್.
ಇನ್ನು ಅಂದಿನಿಂದ ಕೊಹ್ಲಿ ತಮ್ಮ ವೃತ್ತಿಜೀವನವನ್ನು ಅದ್ಭುತವಾಗಿ ನಿರ್ಮಿಸಿಕೊಂಡಿದ್ದಾರೆ. ಅವರು ಕೆಲ ದಶಕಗಳಿಂದ ಅದ್ಭುತವಾಗಿ ಆಡುತ್ತಿದ್ದಾರೆ. ಅವರನ್ನ ನೋಡಿದ್ರೆ ನನ್ನನ್ನ ನಾನು ನೋಡಿಕೊಂಡಂತೆ ಆಗುತ್ತಿದೆ ಎಂದು ವಿರಾಟ್ ಕೊಹ್ಲಿ ಅವರನ್ನ ಸಚಿನ್ ಹೊಗಳಿದಿದ್ದಾರೆ.
ಅಂದಹಾಗೆ ಕಳೆದ ಕೆಲವು ದಿನಗಳಿಂದ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಸೆಂಚೂರಿ ಮಿಸ್ ಆಗುತ್ತಿದೆ. ಅವರು ಶತಕ ಬಾರಿಸಿ ಎರಡು ವರ್ಷಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ, ಸಚಿನ್ ಅವರನ್ನ ಭೇಟಿಯಾಗಬೇಕು ಎಂದು ಅಭಿಮಾನಿಗಳು ಕೋರಿಕೊಳ್ಳುತ್ತಿದ್ದಾರೆ.
Sachin tendulkar-reveals-kohlis-request









