Ukraine : ಉಕ್ರೇನ್ ನ ಕಾರ್ಕ್ಯೂ ಸಿಟಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ನೀರು ಮತ್ತು ಆಹಾರದ ಸಮಸ್ಯೆ
ಹಾವೇರಿ : ರಷ್ಯಾ-ಉಕ್ರೇನ್ ಯುಧ್ಧ ನಡೆಯುತ್ತಿದ್ದು , ಸಂಘರ್ಷದಿಂದಾಗಿ ಉಕ್ರೇನ್ ಕಾದ ಕೆಂಡದಂತಾಗಿದೆ.. ಆದ್ರೆ ಅಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿ ಹೇಳಲು ಅಸಾಧ್ಯವಾಗಿದೆ.. ಭಾರತ ಸರ್ಕಾರ ನಮ್ಮ ದೇಶದವರನ್ನ ವಾಪಸ್ ಕರೆಸಿಕೊಳ್ಳುವ ಕಾರ್ಯತಂತ್ರದಲ್ಲಿ ತೊಡಗಿದೆ..
ಮತ್ತೊಂದೆಡೆ ಉಕ್ರೇನ್ ನ ಕಾರ್ಕ್ಯೂ ಸಿಟಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ನೀರು ಮತ್ತು ಆಹಾರದ ಸಮಸ್ಯೆ ಎದುರಾಗಿರೋದಾಗಿ ಮಾಹಿತಿ ಸಿಕ್ಕಿದೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಪ್ರವೀಣ ಅಜರೆಡ್ಡಿ ಎಂಬ ವಿದ್ಯಾರ್ಥಿ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾನೆ..
ಬೆಳಿಗ್ಗೆಯಿಂದ ಬಾಂಬ್ ಸೌಂಡ್ ಕೇಳ್ತಿರೋದ್ರಿಂದ ವಿದ್ಯಾರ್ಥಿಗಳು ಆತಂಕದಲ್ಲಿ ಸಿಲುಕಿದ್ದಾರೆ.. ತಾವು ಎದುರಿಸ್ತಿರೋ ಸಮಸ್ಯೆ ಬಗ್ಗೆ ಸೆಲ್ಫಿ ವಿಡಿಯೋ ಮಾಡಿ ಕಳಿಸಿದ್ದಾನೆ.. ಭಾರತೀಯ ರಾಯಭಾರಿ ಕಚೇರಿಯಿಂದ ಸೂಕ್ತ ಸ್ಪಂಧನೆ ಸಿಗ್ತಿಲ್ಲ ಅಂತಾ ವಿದ್ಯಾರ್ಥಿ ಅಳಲು ತೋಡಿಕೊಂಡಿದ್ದಾರೆ…








