ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರು ಕತಾರ ಮೂಲಕ ಬರಬಹುದು – Saaksha Tv
ನವದೆಹಲಿ: ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ಪ್ರಯಾಣಿಕರು ಕತಾರ್ ಮೂಲಕ ವಿಮಾನದಲ್ಲಿ ಭಾರತಕ್ಕೆ ಹಿಂದಿರುಗಬಹುದು ಎಂದು ಕೇಂದ್ರ ತಿಳಿಸಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಪ್ರಾರಂಭಿಸಿದ ಬಳಿಕ ಉಕ್ರೇನ್‍ನ ವಾಯುಪ್ರದೇಶ ಮುಚ್ಚಿಹೋಗಿದೆ. ಈ ಹಿನ್ನಲೆಯಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕಷ್ಟವಾಗಿತ್ತಿತ್ತು. ಈಗ ಉಕ್ರೇನ್‍ನಲ್ಲಿ ಸಿಲುಕಿರುವ 20 ಸಾವಿರ ಭಾರತೀಯರು ಮರಳಿ ಬರಲು ಕತಾರ್ ಮಾರ್ಗ ಹಿಡಿಯುವುದು ಒಳಿತು ಎಂಬ ಸಲಹೆಯನ್ನು ವಾಯುಯಾನ ತಜ್ಞರು ನೀಡಿದ್ದಾರೆ.
ಇದೀಗ ಭಾರತೀಯರು ಕತಾರ್‍ನಿಂದ ಭಾರತಕ್ಕೆ ಮರಳಲು ಮೊದಲು ಕತಾರ್ ತಲುಪಬೇಕಾಗಿದೆ. ಆದರೆ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರು ಹೇಗೆ ಕತಾರ್ ಪ್ರವೇಶಿಸಬೇಕೆಂಬ ವಿಷಯವನ್ನು ಸ್ಪಷ್ಟಪಡಿಸಿಲ್ಲ.
ಈ ಬಗ್ಗೆ ಕತಾರ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವಿಟ್ಟರ್‍ನಲ್ಲಿ ಭಾರತೀಯ ಸರ್ಕಾರ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ಉಕ್ರೇನ್‍ನಲ್ಲಿರುವ ಭಾರತದ ಪ್ರಯಾಣಿಕರಿಗೆ ಕತಾರ್‍ನಿಂದ ಭಾರತಕ್ಕೆ ಹಿಂದಿರುಗಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಉಕ್ರೇನ್‍ನಿಂದ ಭಾರತೀಯರು ಏರ್ ಬಬಲ್ ವ್ಯವಸ್ಥೆಯ ಅಡಿಯಲ್ಲಿ ಸಾರಿಗೆ ಮುಖಾಂತರ ಕತಾರ್ ಪ್ರವೇಶಿಸಬಹುದು ಎಂದು ತಿಳಿಸಿದೆ.








