ಮಾರ್ಚ್ 26 ರಿಂದ ಮೇ 29 ರವರೆಗೆ ಐಪಿಎಲ್ ಹಂಗಾಮ…!
ಮುಂಬೈ : ಅಂತೂ ಇಂತೂ ಈ ಬಾರಿಯ ಐಪಿಎಲ್ ಹಂಗಾಮಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
15 ನೇ ಆವೃತ್ತಿಯ ಐಪಿಎಲ್ ಸಂಗ್ರಾಮ ಮಹಾರಾಷ್ಟ್ರದಲ್ಲಿ ನಡೆಯಲಿದೆ.
ಮುಂದಿನ ತಿಂಗಳು 26 ರಿಂದ ಮೇ 29 ರವರೆಗೂ ಈ ಬಾರಿಯ ಐಪಿಎಲ್ ಪಂದ್ಯಗಳು ನಡೆಯಲಿವೆ.
ಈ ಬಗ್ಗೆ ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ.
ಮುಂಬೈನ ವಾಂಖೆಡೆ, ಬ್ರಬೋರ್ನ್, ಡಿವೈ ಪಾಟೀಲ್ ಸ್ಟೇಡಿಯಂ ಹಾಗೂ ಪುಣೆ ಮೈದಾನದಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ.
ಲೀಗ್ ಮೂಲಗಳ ಪ್ರಕಾರ, ಮಹಾರಾಷ್ಟ್ರ ಸರ್ಕಾರವು ಮಾರ್ಗಸೂಚಿಗಳ ಪ್ರಕಾರ ಶೇಕಡಾ 40 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
ಅಂದಹಾಗೆ ಈ ಹಿಂದೆ ಐಪಿಎಲ್ ಪಂದ್ಯಾವಳಿಗಳನ್ನು ಮಾರ್ಚ್ 27 ರಿಂದ ಆರಂಭಿಸಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿತ್ತು.









