ಮಾಸ್ಕೋ : ಜಗತ್ತಿನಾದ್ಯಂತ ಹೆಮ್ಮಾರಿ ಕೊರೊನಾ ವೈರಸ್ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ದಿನದಿಂದ ದಿನಕ್ಕೆ ಮಿಂಚಿನ ವೇಗದಲ್ಲಿ ಕೊರೊನಾ ಹರಡುತ್ತಿದ್ದು, ಘಟಾನುಘಟಿ ದೇಶಗಳೇ ಈ ಹೆಮ್ಮಾರಿ ಮುಂದೆ ತಲೆ ಬಾಗಿವೆ. ಈ ಎಲ್ಲದರ ನಡುವೆ ಕೊರೊನಾ ವಿರುದ್ಧ ತಮ್ಮ ಜೀವವನ್ನು ಪಣಕ್ಕಿಟ್ಟು ವೈದ್ಯರು ಹೋರಾಡುತ್ತಿದ್ದಾರೆ. ಈ ಮಹಾಮಾರಿಯನ್ನು ತಡೆಯಲು ವೈದ್ಯಕೀಯ ಸಿಬ್ಬಂದಿ ಮತ್ತು ನರ್ಸ್ ಗಳು 24 ಗಂಟೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ.
ಏತನ್ಮಧ್ಯೆ ನರ್ಸ್ ಒಬ್ಬರು ಬಿಕಿನಿ ತೊಟ್ಟು ಪುರುಷರ ವಾರ್ಡ್ ನಲ್ಲಿ ಕೆಲಸ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ವೈರಲ್ ಆಗುತ್ತಿವೆ. ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ವಿವಿಧ ರೀತಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಕೆಲಸ ಮಾಡುತ್ತಿರುವ 20 ವರ್ಷದ ನರ್ಸ್ ಒಬ್ಬರು ಕೊರೊನಾಗೆ ತುತ್ತಾಗಿರುವ ಪುರುಷರ ವಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದು ಪಿಪಿಈ ಪಾರದರ್ಶಕ ಗೌನ್ ಧರಿಸಿ ಚಿಕಿತ್ಸೆ ನೀಡುತ್ತಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ನರ್ಸ್ ಸ್ಪಷ್ಟನೆ ನೀಡಿದ್ದಾರೆ.
ಯುನಿಫಾರ್ಮ್ ಧರಿಸಿ ಅದರ ಮೇಲೆ ಪಿಪಿಈ ಕಿಟ್ ಧರಿಸಿದರೆ ಸೆಕೆಯಾಗುತ್ತದೆ. ಅದೇ ಕಾರಣಕ್ಕೆ ನಾನು ಬಿಕಿನಿ ಧರಿಸಿದ್ದಾಗಿ ನರ್ಸ್ ಹೇಳಿದ್ದಾರೆ.








