ಪುನೀತ್ ರಾಜ್ ಕುಮಾರ್ ಇಂಟ್ರೋಡಕ್ಷನ್ ಸಾಂಗ್ ರಿಲೀಸ್ ಗೆ ಡೇಟ್ ಫಿಕ್ಸ್ – Saaksha Tv
ಜೇಮ್ಸ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ. ಈ ಸಿನಿಮಾ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತೂರಕರಾಗಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್ ಮತ್ತು ಟೀಸರ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಟೀಸರ್ ನಲ್ಲಿ ಪುನಿತ್ ಅವರ ಅಭಿನಯಕ್ಕೆ ಶಿವರಾಜಕುಮಾರ ಅವರು ಧ್ವನಿ ನೀಡಿದ್ದು, ಮತ್ತಷ್ಟು ಕ್ರೇಜ್ ಹೆಚ್ಚಿಸಿದೆ.
ಅಲ್ಲದೇ ಮಾರ್ಚ್ 17 ಕ್ಕೆ ಅಂದರೆ ಅಪ್ಪು ಜನ್ಮ ದಿನಕ್ಕೆ ” ಜೇಮ್ಸ್” ಆಗಮನಕ್ಕೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದೆ. ಇನ್ನು ಜೇಮ್ಸ್ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಲು ದೊಡ್ಮೆನೆ ಅಭಿಮಾನಿಗಳು ದೊಡ್ಡ ಮಟ್ಟದ ತಯಾರಿ ಮಾಡ್ಕೊಂತಿದ್ದಾರೆ. ಈ ಗ್ಯಾಪ್ ನಲ್ಲಿ ಈಗ ಪುನೀತ್ ಅಭಿಮಾನಿ ದೇವರುಗಳಿಗೆ “ಜೇಮ್ಸ್” ಸಿನಿ ಬಳಗದಿಂದ ಸಿಹಿ ಸುದ್ದಿಯೊಂದು ಬಂದಿದೆ.
ಹೌದು ಅದು ‘ಜೇಮ್ಸ್’ಚಿತ್ರದ ‘ಟ್ರೇಡ್ಮಾರ್ಕ್’ ಹಾಡಿನ ಲಿರಿಕಲ್ ವಿಡಿಯೋ ಮಾ.1ರಂದು ಬೆಳಗ್ಗೆ 11.11ಕ್ಕೆ ಬಿಡುಗಡೆ ಆಗಲಿದೆ. ಈ ವಿಷಯವನ್ನು ‘ಪಿಆರ್ಕೆ ಆಡಿಯೋ’ ಸೋಶಿಯಲ್ ಮೀಡಿಯಾ ಖಾತೆ ಮೂಲಕ ತಿಳಿಸಿದೆ. ಇದು “ಜೇಮ್ಸ್” ಚಿತ್ರದ ಪುನೀತ್ ರಾಜ್ ಕುಮಾರ್ ಇಂಟ್ರೋಡಕ್ಷನ್ ಸಾಂಗ್ ಆಗಿದೆ.
ಮಾರ್ಚ್ 1 ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ 5 ಭಾಷೆಗಳಲ್ಲಿ ಈ ಹಾಡನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಇನ್ನು ಈ ಹಾಡು ” ಟ್ರೇಡ್ ಮಾರ್ಕ್” ಅನ್ನೋ ಸಾಹಿತ್ಯದಿಂದ ಶುರುವಾಗಲಿದ್ದು ,ಚರಣ್ ರಾಜ್ ಸಂಗೀತಕ್ಕೆ ಚೇತನ್ ಸಾಹಿತ್ಯ ಬರೆದಿದ್ದಾರೆ.








