ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನ ಒಳ್ಳೆಯದಲ್ಲ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು – Saaksha Tv
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನ ಒಳ್ಳೆಯದಲ್ಲ. ಶಾಲಾ- ಕಾಲೇಜುಗಳಲ್ಲಿ ಜಾತಿ ಮತ ಇರುವುದಿಲ್ಲ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಬೆಂಗಳೂರಿನ ಸರ್ಜಾಪುರದ ಖಾಸಗಿ ಶಾಲೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ನಾವೆಲ್ಲರೂ ಒಂದೇ. ನಾವೆಲ್ಲರೂ ಭಾರತೀಯರು. ಭಾರತೀಯತೆ ನಮ್ಮದಾಗಬೇಕು. ಶಾಲಾ ಕಾಲೇಜಿನಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ನಡೆಸಬೇಕು ಎಂದರು.
ಅಲ್ಲದೇ ಪರಿಸರ ಕಾಳಜಿ, ಹವಾಮಾನ ವಿಚಾರದಲ್ಲಿ ಜಾಗೃತಿ ಮೂಡಿಸಬೇಕು. ಇಡೀ ದೇಶದ ಶೈಕ್ಷಣಿಕ ಸಂಸ್ಥೆಗಳನ್ನು ಅಳವಡಿಸಬೇಕು. ಶಾಲಾ- ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಧರ್ಮದ ಬಗ್ಗೆ ತಿಳಿಸಬೇಕು. ಎಲ್ಲಾ ಭಾಷೆಯನ್ನು ಕಲಿಯಬೇಕು, ಮಾತೃ ಭಾಷೆ ಮರೆಯಬಾರದು ಎಂದು ಹೇಳಿದರು.
ಹಾಗೇ ಶಾಲಾ- ಕಾಲೇಜುಗಳಲ್ಲಿ ಯಾವುದೇ ವಿವಾದ ಬೇಡ. ಶಾಲೆಗಳು ಮಾಡಿರುವ ಕ್ರಮವನ್ನು ವಿದ್ಯಾರ್ಥಿ ಅಳವಡಿಸಕೊಳ್ಳಬೇಕು. ಇರುವೆಗಳಿಗೆ ಸಕ್ಕರೆ ಹಾಕಿ, ಹಾವಿಗೆ ಹಾಲೆರದು, ಪಶುಗಳಿಗೆ ಮೇವು ಹಾಕಿ, ತಿಲಕವಿಟ್ಟು ಗೌರವಿಸುವ ಸಂಸ್ಕಾರ ನಮ್ಮದು. ಎಲ್ಲಾ ಭಾಷೆಯನ್ನು ಕಲಿಯಬೇಕು ಆದರೆ ಮೊದಲು ನಿಮ್ಮ ಮಾತೃ ಭಾಷೆ ಕಲೀರಿ. ಮೊದಲು ಕನ್ನಡ ಕಲೀರಿ. ಮಾತೃ ಭಾಷೆ ಕಣ್ಣು ಇದ್ದಂತೆ. ಇತರೆ ಭಾಷೆ ಕನ್ನಡಕ ಇದ್ದಂತೆ. ಕಣ್ಣೆ ಇಲ್ಲದಿದ್ದರೆ ರಿಬಾನ್ ಗ್ಲಾಸ್ ಹಾಕಿದ್ದರು ಪ್ರಯೋಜನ ಇರಲ್ಲ ಎಂದು ತಿಳಿಸಿದ್ದಾರೆ.








