ಪಶ್ಚಿಮ ಬಂಗಾಳ ಸ್ಥಳಿಯ ಸಂಸ್ಥೆ ಚುನಾವಣೆ – TMC, BJP ಕಾರ್ಯಕರ್ತರ ನಡುವೆ ಮಾರಾಮಾರಿ..
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ರಾಜ್ಯದ ಹಲವೆಡೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಹಿಂಸಾಚಾರದ ಬಗ್ಗೆ ವರದಿಯಾಗಿದೆ. ಪ್ರತಿಪಕ್ಷಗಳ ಅಭ್ಯರ್ಥಿಗಳನ್ನು ಥಳಿಸಿರುವ ವರದಿಗಳು, ಸುಳ್ಳು ಮತದಾನ, ಬೂತ್ ಅಕ್ರಮ ಮತ್ತು ಇತರ ಚುನಾವಣಾ ಅವ್ಯವಹಾರಗಳ ಆರೋಪಗಳು ಕೇಳಿಬಂದಿದೆ.
ಮತದಾನ ವೇಳೆಯಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಎರಡು ಇವಿಎಂಗಳನ್ನು ಧ್ವಂಸಗೊಳಿಸಲಾಗಿದೆ. ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸುತ್ತಿದ್ದು, ಮತದಾನ ಮಾಡಲು ಬಿಡುತ್ತಿಲ್ಲ. ಎಲ್ಲಾ ಬೂತ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿಜೆಪಿ ಮುಖಂಡ ಅರ್ಜುನ್ ಸಿಂಗ್ ಆರೋಪಿಸಿದ್ದಾರೆ.
A clash broke between TMC & BJP workers during the polling for #WestBengal civic polls in North 24 Parganas.
"2 EVMs vandalized at ward 9, similar situation across the state. Police arresting BJP workers, not letting them vote. All booths have been captured: Arjun Singh, BJP pic.twitter.com/iCwQEub5Kj
— ANI (@ANI) February 27, 2022
ಹಿಂಸಾಚಾರವನ್ನು ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್, ಚುನಾವಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುವುದಿಲ್ಲ ಎಂದು ಊಹಿಸಲೂ ಸಾಧ್ಯವಿಲ್ಲ. ಬಂಗಾಳದಲ್ಲಿ ಕಾನೂನಿನ ಆಡಳಿತವಿಲ್ಲ ಎಂದಿದ್ದಾರೆ.
ಕಳೆದ ರಾತ್ರಿ ಮಿಡ್ನಾಪುರ ಪುರಸಭೆಯ ವಾರ್ಡ್ ನಂಬರ್ 8ರ ಬೂತ್ ಸಂಖ್ಯೆ 163ರ ಬಳಿ ಟಿಎಂಸಿ ತಮ್ಮ ಟೆಂಟ್ ನ್ನು ಸುಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದರ ವಿರುದ್ಧ ಪೊಲೀಸರಿಗೆ ತಿಳಿಸಿದ್ದೇವೆ ಆದರೆ, ಅವರು ಬಂದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.