ಸಲಗ ಗೆಲುವಿನ ಬಳಿಕ “ಭೀಮ” ನಾಗಿ ಬಂದ ದುನಿಯಾ ವಿಜಯ್
ಸಲಗ ಮೂಲಕ ಮೊದಲ ನಿರ್ದೇಶನದಲ್ಲೇ ಗೆಲುವಿನ ಸಿಹಿ ಕಂಡಿರುವ ದುನಿಯಾ ವಿಜಯ್ ಶಿವರಾತ್ರಿ ಹಬ್ಬದಂದು ಸಿನಿಪ್ರಿಯರಿಗೆ ಸರ್ಪ್ರೈಸ್ ನೀಡಿದ್ದಾರೆ. ಶಿವರಾತ್ರಿ ಪ್ರಯುಕ್ತ ಹಲವು ಚಿತ್ರತಂಡಗಳು ಹೊಸಹೊಸ ಅಪ್ಡೇಟ್ ನೀಡುತ್ತಿವೆ. ದುನಿಯಾ ವಿಜಯ್ ಕಡೆಯಿಂದ ಅವರ ಮುಂದಿನ ಸಿನಿಮಾ ಬಗ್ಗೆ ದೊಡ್ಡ ಅಪ್ಡೇಟ್ ಸಿಕ್ಕಿದೆ.
ಕಳೆದ ವರ್ಷ ತೆರೆಗೆ ಬಂದ ದುನಿಯಾ ವಿಜಯ್ನಟನೆಯ ಸಲಗ ಸಿನಿಮಾ ಬಾಕ್ಸ್ ಆಫಿಸ್ ನಲ್ಲಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ದುನಿಯಾ ವಿಜಯ್ ನಟನೆಯ ಜೊತೆಗೆ ಆ್ಯಕ್ಷನ್ ಕಟ್ ಕೂಡ ಹೇಳಿದ್ದರು. ಮೊದಲ ನಿರ್ದೇಶನದಲ್ಲೇ ಅವರು ಗೆದ್ದು ಬೀಗಿದ್ದರು. ಇತ್ತೀಚೆಗೆ ಚಿತ್ರತಂಡ ಈ ಸಿನಿಮಾ ಯಶಸ್ಸನ್ನು ಸಂಭ್ರಮಿಸಿ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು. ‘ಸಲಗ’ ಬಳಿಕ ಮತ್ತೆ ನಿರ್ದೇಶನಕ್ಕೆ ಇಳಿಯೋಕೆ ದುನಿಯಾ ವಿಜಯ್ ರೆಡಿ ಆಗಿದ್ದಾರೆ . ಶಿವರಾತ್ರಿ ಪ್ರಯುಕ್ತ ಸಿನಿಮಾದ ಟೈಟಲ್ ಘೋಷಣೆ ಮಾಡಿದ್ದಾರೆ. ಚಿತ್ರಕ್ಕೆ ‘ಭೀಮ’ ಎಂದು ನಾಮಾಕರಣ ಮಾಡಲಾಗಿದೆ.
#VK28 pic.twitter.com/ZfZ7L7owfC
— Duniya Vijay (@OfficialViji) March 1, 2022
‘ಸಲಗ’ ಸಿನಿಮಾದಲ್ಲಿ ರೌಡಿಸಂ ಕಥೆ ಹೆಳಿದ್ದ ದುನಿಯಾ ವಿಜಯ್ ಚಿತ್ರವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದರು. ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರದ ಯಶಸ್ಸಿನಿಂದ ವಿಜಯ್ ಅವರ ಆತ್ಮವಿಶ್ವಾಸ ಹೆಚ್ಚಾಗಿದೆ ಹಾಗಾಗಿ ಮತ್ತೊಮ್ಮೆ ನಿರ್ದೇಶನಕ್ಕೆ ಇಳಿದಿದ್ದಾರೆ.
ವಿಜಯ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ 28ನೇ ಸಿನಿಮಾದ ಟೈಟಲ್ ಅನೌನ್ಸ್ ಮಾಡುವುದರ ಜತೆಗೆ ಮೋಷನ್ ವಿಡಿಯೋ ಹಂಚಿಕೊಂಡಿದ್ದಾರೆ. ಸಿನಿಮಾ ಟೈಟಲ್ ಅಡಿಗೆ ‘ಕೆಣಕದಿದ್ರೆ ಕ್ಷೇಮ’ ಎನ್ನುವ ಟ್ಯಾಗ್ಲೈನ್ ನೀಡಲಾಗಿದೆ. ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.